Select Your Language

Notifications

webdunia
webdunia
webdunia
webdunia

ಮಹಿಳೆಯರಿಗೆ ಮಾರ್ಚ್ 8 ರಂದು ಉಚಿತ ಪ್ರಯಾಣ ಯೋಜನೆ

Free travel scheme for women on March 8
bangalore , ಶನಿವಾರ, 4 ಮಾರ್ಚ್ 2023 (19:13 IST)
ಮಾರ್ಚ್ 8ರಂದು ವಿಶ್ವ ಮಹಿಳಾ ದಿನಾಚರಣೆ ಇರುವುದರಿಂದ ಮಹಿಳಾ ಪ್ರಯಾಣಿಕರಿಗಾಗಿ ಮಾರ್ಚ್ 8 ರಂದು ಉಚಿತ ಪ್ರಯಾಣ ಯೋಜನೆಯನ್ನು ಬಿಎಂಟಿಸಿ ಮಾಡಿದೆ. ಇದಕ್ಕೆ ಸರ್ಕಾರ ಅನುಮೋದನೆ ನೀಡಿದರೆ ಮಾರ್ಚ್ 8ರಂದು ಮಹಿಳಾ ಪ್ರಯಾಣಿಕರು ಬಿಎಂಟಿಸಿ ಬಸ್ನಲ್ಲಿ ಯಾವುದೇ ಟಿಕೆಟ್ ಇಲ್ಲದೆ ಪ್ರಯಾಣ ಮಾಡಬಹುದಾಗಿದೆ. ಮಾರ್ಚ್ 8ರಂದು ರಂದು ಮಾತ್ರ ಈ ವಿಶೇಷ ಸೇವೆ ಇರಲಿದ್ದು, ಬಿಎಂಟಿಸಿ ತನ್ನ ಮಹಿಳಾ ಪ್ರಯಾಣಿಕರನ್ನು ಆಕರ್ಷಿಸುವುದರ ಜೊತೆಗೆ ಬಸ್ನಲ್ಲಿ ಪ್ರಯಾಣಿಸುವಂತೆ ಉತ್ತೇಜಿಸಲು ಬಿಎಂಟಿಸಿ ಪ್ಲಾನ್ ಮಾಡಿದೆ. ಇನ್ನು ಸಾಮಾನ್ಯ ಬಸ್ಗಳಲ್ಲಿ ಮಾತ್ರ ಈ ವಿಶೇಷ ಸೇವೆಯ ಲಾಭ ಪಡೆಯಬಹುದಾಗಿದೆ, ಒಂದು ವೇಳೆ ಮಾರ್ಚ್ 8ರಂದು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ಎಲ್ಲಾ ಸೇವೆಗಳಲ್ಲಿ ಉಚಿತ ಸಾರಿಗೆ ಸೌಲಭ್ಯ ಕಲ್ಪಿಸಿದಲ್ಲಿ ಉಂಟಾಗುವ ವೆಚ್ಚದ ವಿವರಗಳನ್ನು ಬಿಎಂಟಿಸಿ ತಿಳಿಸಿದ್ದು. ಮಹಿಳೆಯರಿಗೆ ಕಲ್ಪಿಸುವ ಉಚಿತ ಪ್ರಯಾಣದಿಂದಾಗಿ ಸಂಸ್ಥೆಗೆ ಅಂದಾಜು 8.17 ಕೋಟಿ ವೆಚ್ಚ ಉಂಟಾಗಬಹುದೆಂದು ಅಂದಾಜಿಸಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಶಾಂತ್ ಅಮಾನತ್ತು ಮಾಡಲು ಲೋಕಾಯುಕ್ತ ಪತ್ರ