Select Your Language

Notifications

webdunia
webdunia
webdunia
webdunia

ಇವತ್ತಿನಿಂದ ಮಹಿಳೆಯರಿಗೆ ಫ್ರೀ ಪ್ರಯಾಣ- ಉಚಿತ ಪ್ರಯಾಣಕ್ಕೆ ಕೌಂಟ್ ಡೌನ್ ಶುರು

ಇವತ್ತಿನಿಂದ ಮಹಿಳೆಯರಿಗೆ ಫ್ರೀ ಪ್ರಯಾಣ- ಉಚಿತ ಪ್ರಯಾಣಕ್ಕೆ ಕೌಂಟ್ ಡೌನ್ ಶುರು
bangalore , ಭಾನುವಾರ, 11 ಜೂನ್ 2023 (11:17 IST)
ಮಹಿಳೆಯರ ಉಚಿತ ಬಸ್ ಪ್ರಯಾಣಕ್ಕೆ ಕ್ಷಣಗಣನೆ ಶುರುವಾಗಿದೆ. ಕೆಲವೇ ಕ್ಷಣಗಳಲ್ಲಿ ಶಕ್ತಿ ಯೋಜನೆಗೆ  ಸಿಎಂ ಸಿದ್ದರಾಮಯ್ಯ ಚಾಲನೆ ನೀಡಲಿದ್ದಾರೆ.ವಿಧಾನಸೌಧದಲ್ಲಿ ಬೆಳಗ್ಗೆ 11 ಗಂಟೆಗೆ ಅಧಿಕೃತ ಚಾಲನೆ ನೀಡಲಿದ್ದು,ಚಾಲನೆ ಬಳಿಕ ಬಸ್ಸಿನಲ್ಲಿ ಸಿಎಂ ಸಿದ್ದರಾಮಯ್ಯ ಪ್ರಯಾಣ ಮಾಡಲಿದ್ದಾರೆ.ಮಧ್ಯಾಹ್ನ 1 ಗಂಟೆ ಬಳಿಕ ಮಹಿಳೆಯರಿಗೆ ಉಚಿತ ಪ್ರಯಾಣ ಅವಕಾಶ ಇರಲಿದೆ.
 
ಸರ್ಕಾರದ ಮೊದಲ ಗ್ಯಾರಂಟಿ ಅನುಷ್ಠಾನಕ್ಕೆ ಕೌಂಟ್ ಡೌನ್ ಶುರುವಾಗಿದ್ದು,ಇಂದಿನಿಂದ ಮಹತ್ವಾಕಾಂಕ್ಷಿ ಶಕ್ತಿ ಯೋಜನೆ ಜಾರಿಯಾಗಲಿದೆ.ಇಂದು ಮಧ್ಯಾಹ್ನದಿಂದ ರಾಜ್ಯದ ಮಹಿಳೆಯರಿಗೆ ಪ್ರಯಾಣ ಫುಲ್ ಫ್ರೀ.ಬಸ್ ನಲ್ಲಿ ಉಚಿತ ಪ್ರಯಾಣಕ್ಕೆ  ರಾಜ್ಯದ ಮಹಿಳೆಯರು ಸಜ್ಜಾಗಿದ್ದು,ಫ್ರೀ ಬಸ್ ಸೇವೆ ನೀಡಲು  ಸಾರಿಗೆ ನಿಗಮಗಳು ಸಜ್ಜಾಗಿದೆ.ಇಂದು ಬೆಳಗ್ಗೆ 11 ಕ್ಕೆ ಫ್ರೀ ಬಸ್ ಸೇವೆಗೆ ಸಿಎಂ ಚಾಲನೆ ನೀಡಲಿದ್ದು,ಶಕ್ತಿ ಯೋಜನೆಯನ್ನು ಹಬ್ಬದಂತೆ ಸರ್ಕಾರ ಆಚರಿಸಲು ತಯಾರಿ ಮಾಡಿಕೊಂಡಿದೆ.ಸರ್ಕಾರ ವಿಧಾನಸೌಧ ಮುಂಭಾಗ ಫ್ರೀ   ಬಸ್ ಗಳಿಗೆ ಹೂವಿನ ಅಲಂಕಾರ ಮಾಡಿದೆ. ಬಿಎಂಟಿಸಿ ಚಾಲನೆ ಬಳಿಕ ವಿಧಾನಸೌಧ ಮೆಜೆಸ್ಟಿಕ್ ಗೆ ಬಸ್ ನಲ್ಲಿ ಸಿಎಂ ಸಂಚಾರ ಮಾಡಲಿದ್ದಾರೆ.
 
ಮಹಿಳೆಯರೇ ರೂಲ್ಸ್ ನೋಡಿ ಬಸ್ ಹತ್ತಿ ಎಲ್ಲ ಬಸ್ ಗಳಲ್ಲೂ ಉಚಿತವಾಗಿ ಪ್ರಯಾಣಿಸುವಂತಿಲ್ಲ.ಬಿಎಂಟಿಸಿ,ಕೆಎಸ್ ಆರ್ ಟಿಸಿ ಬಸ್ ಗಳಲ್ಲಿ ಮಾತ್ರ ಪ್ರಯಾಣ .ಖಾಸಗಿ ಬಸ್, ಹೊರ ರಾಜ್ಯದ ಬಸ್ ಗಳಲ್ಲಿ ಫ್ರೀ ಇಲ್ಲ .ಎಸಿ,ಸ್ಲೀಪರ್ ಬಸ್ ಗಳಲ್ಲಿ ಉಚಿತ ಪ್ರಯಾಣ ಇಲ್ಲ.ರಾಜಹಂಸ, ನಾನ್ ಎಸಿ ಸ್ಲೀಪರ್ ಎಸಿ ಸ್ಲೀಪರ್ ಉಚಿತ ಇಲ್ಲ.ಐರಾವತ ಗೋಲ್ಡ್ ಕ್ಲಾಸ್, ಅಂಬಾರಿ ಬಿಟ್ಟು ಉಳಿದ ಬಸ್ ಫ್ರೀ ಉಚಿತ ಬಸ್ ಪ್ರಯಾಣಕ್ಕೆ ಯಾವುದೇ ದೂರದ ಮಿತಿಯಿಲ್ಲ.ರಾಜ್ಯದಲ್ಲಿ ಎಲ್ಲಿಂದ ಎಲ್ಲಿಗೆ ಬೇಕಾದರೂ ಪ್ರಯಾಣ ಮಾಡಬಹುದು
 
ಫ್ರೀ ಬಸ್ ಸಂಚಾರ ಅಂತ ರೂಲ್ಸ್ ಬ್ರೇಕ್ ಮಾಡೋ ಹಾಗಿಲ್ಲ.ಫ್ರೀ ಸಂಚಾರ ಕೆಲ ಷರತ್ತುಗಳನ್ನ ಹಾಕಿರೋ ಸರ್ಕಾರ ಮಹಿಳಾ ಪ್ರಯಾಣಿಕರು ಉಚಿತ ಲಗೇಜ್ ಮಿತಿಯನ್ನು ಹೊರತುಪಡಿಸಿ .ಹೆಚ್ಚುವರಿ ಲಗೇಜ್ ತೆಗೆದುಕೊಂಡು ಹೋದಲ್ಲಿ ನಿಯಮಾನುಸಾರ ‌ಟಿಕೆಟ್ ಎಂಟಿಸಿ ಹೊರತುಪಡಿಸಿ ಸಾಮಾನ್ಯ ಬಸ್‌ಗಳಲ್ಲಿ ಶೇ 50 ರಷ್ಟು ಪುರುಷರಿಗೆ ಮೀಸಲಾತಿ ಪುರುಷರ ಸೀಟು ಭರ್ತಿಯಾಗದೇ ಇದ್ದಾಗ ಮಹಿಳೆಯರು ಪುರುಷರ ಸೀಟ್​ನಲ್ಲಿ ಕೂರಬಹುದು.ಕರ್ನಾಟಕ ರಾಜ್ಯದ ಮಹಿಳೆಯರಿಗೆ (ವಿದ್ಯಾರ್ಥಿನಿಯರು ಸೇರಿದಂತೆ ) ಮಾತ್ರ ಉಚಿತ ಪ್ರಯಾಣ.ಮಹಿಳಾ ಪ್ರಯಾಣಿಕರ ಪೈಕಿ 6 ವರ್ಷದಿಂದ 12 ವರ್ಷದವರೆಗಿನ ಬಾಲಕಿಯರು ಲಿಂಗತ್ವ ಅಲ್ಪ ಸಂಖ್ಯಾತರಿಗೆ ಫ್ರೀ ಸಂಚಾರ ಭಾಗ್ಯ ಇರಲಿದೆ.ಕೆ ಎಸ್ ಆರ್ ಟಿ ಸಿಯ ನಗರ ಸಾರಿಗೆ, ಸಾಮಾನ್ಯ  ಸಾರಿಗೆಗಳಲ್ಲಿ ಮಾತ್ರ ಮಹಿಳೆಯರಿಗೆ ಉಚಿತ.ಇನ್ನೂ ಐಷಾರಾಮಿ ಬಸ್ಸುಗಳಾದ ರಾಜಹಂಸ, ನಾನ್ ಎಸಿ ಸ್ಲೀಪರ್, ಎಸಿ ಸ್ಲೀಪರ್, ಐರಾವತ ಐರಾವತ ಕ್ಲಬ್ ಕ್ಲಾಸ್, ಅಂಬಾರಿ, ಅಂಬಾರಿ ಡ್ರೀಮ್ ಕ್ಲಾಸ್, ಅಂಬಾರಿ ಉತ್ಸವ,ಫ್ಲೈ ಬಸ್, ಇವಿ ಪ್ಲಸ್ ಸಾರಿಗಗೆಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವು ಅನ್ವಯಿಸುವುದಿಲ್ಲ.ಮಹಿಳಾ ಪ್ರಯಾಣಿಕರಿಗೆ ಪ್ರಯಾಣ ದೂರುದ ಯಾವುದೇ ಮಿತಿ ಇರುವುದಿಲ್ಲ.
 
ಫ್ರೀ ಸಂಚಾರಕ್ಕೆ ಐಡಿ ಕಾರ್ಡ್ ಕಡ್ಡಾಯ, ಆಧಾರ್ ಕಾರ್ಡ್/-ಚುನಾವಣಾ ಆಯೋಗ ವಿಚತರಿಸುವ ಮತದಾರರ ಗುರುತಿನ ಚೀಟಿ/ಚಾಲನಾ ಪರವಾನಗಿ ಪತ್ರ/ವಾಸಸ್ಥಳ ನಮೂದಿಸಿರುವ ಭಾರತ ಸರ್ಕಾರದ ಇಲಾಖೆಗಳು, ಸಾರ್ವಜನಿಕ ವಲಯದ ಉದ್ದಿಮೆ, ಸಂಸ್ಥೆಗಳು ವಿತರಿಸುವ ಗುರುತಿನ ಚೀಟಿ/ಅಂಗವಿಕಲರ ಮತ್ತು ಹಿರಿಯ ನಾಗರಿಕರ ಕಲ್ಯಾಣ ನಿರ್ದೇಶನಾಲಯದವರು ವಿತರಿಸಿರುವ ಗುರುತಿನ ಚೀಟಿ ಶಕ್ತಿ ಸ್ಮಾರ್ಟ್ ಕಾರ್ಡ್ ಗಾಗಿ ಸೇವಾ ಸಿಂಧುವಿನಲ್ಲಿ ಆನ್ ಲೈನ್ ಅರ್ಜಿ ಸಲ್ಲಿಸಿ,ಮೂರು ತಿಂಗಳವರೆಗೆ ಗುರುತಿನ ಚೀಟಿ ತೋರಿಸಿ ಶೂನ್ಯ ಟಿಕೆಟ್ ಪಡೆದು ಪ್ರಯಾಣಿಸಲು ಅವಕಾಶ ಇರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮದ್ಯ ಬೆಲೆ ಏರಿಕೆ ಮಾಡಿದ ಅಬಕಾರಿ ಇಲಾಖೆ..!