Select Your Language

Notifications

webdunia
webdunia
webdunia
webdunia

ಟ್ರೇಡ್ ಯುನಿಯನ್ ‌ಹಾಗೂ ಫೆಡರೇಶನ್ ನಿಂದ ಫ್ರೀ ಬಸ್ ಪಾಸ್ ಗೆ ವಿರೋಧ ಮಾಡಲ್ಲ

ಟ್ರೇಡ್ ಯುನಿಯನ್ ‌ಹಾಗೂ ಫೆಡರೇಶನ್ ನಿಂದ ಫ್ರೀ ಬಸ್ ಪಾಸ್ ಗೆ ವಿರೋಧ ಮಾಡಲ್ಲ
bangalore , ಗುರುವಾರ, 1 ಜೂನ್ 2023 (21:15 IST)
ಸರ್ಕಾರ ಫ್ರೀ ಬಸ್ ಪಾಸ್ ಸ್ಕೀಂ ತಂದಿದೆ.ಟ್ರೇಡ್ ಯುನಿಯನ್ ‌ಹಾಗೂ ಫೆಡರೇಶನ್ ನಿಂದ ಫ್ರೀ ಬಸ್ ಪಾಸ್ ಗೆ ವಿರೋಧ ಮಾಡಲ್ಲ,ಬೆಂಬಲ ಕೊಡುತ್ತೇವೆ.ಫ್ರೀ ಬಸ್ ಪಾಸ್ ಗೆ ಬೇಕಾಗುವ ಹಣವನ್ನು ತಿಂಗಳ ಮುಂಗಡವಾಗಿ ಸಾರಿಗೆ ಇಲಾಖೆಗೆ ಕೊಟ್ಟು ಬಿಡಿ.ಮಧ್ಯಮ ವರ್ಗದ ಮಹಿಳೆಯರು ಫ್ರೀ ಕೊಡ್ತಾರೆ ಎಂದು ಕೆಎಸ್ ಆರ್ ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ.
 
ಇನ್ನೂ ಸಾರಿಗೆ ಇಲಾಖೆಗೆ ನಷ್ಟ ಆಗಲ್ಲ.ಸಾರಿಗೆ ನಿಗಮಗಳು ಈಗಾಗಲೇ ಒಟ್ಟು 6 ಸಾವಿರ ಕೋಟಿ ನಷ್ಟದಲ್ಲಿವೆ.ಬೆಂಗಳೂರಲ್ಲಿ 50% ಮಹಿಳೆಯರು, ಹೊರಗಡೆ ಭಾಗದಲ್ಲಿ 30-40% ಬಸ್ ನಲ್ಲಿ ಓಡಾಡತ್ತಾರೆ.ಆದಾಯ-ನಷ್ಟದ ಬಗ್ಗೆ ನೋಡಬಾರದು.ಸರ್ಕಾರ ಸಂಪನ್ಮೂಲಗಳನ್ನು ಒದಗಿಸಬೇಕು.1987 ರಲ್ಲಿ ಇನ್ಸೆಟಿವ್ ಸ್ಕೀಮ್ ತಂದಿವೆ.ಕಂಡೆಕ್ಟರ್ ಹಾಗೂ ಡ್ರೈವರ್  ಜೇಬ್ ಗೆ ಸ್ವಲ್ಪ ಮಟ್ಟಿಗೆ ಕತ್ತರಿ ಬೀಳಬಹುದು.ಬೆಳಗ್ಗೆಯಿಂದ ಸಂಜೆಯವರೆಗೂ  ಕಲೆಕ್ಷನ್ ಆಗುವ ಹಣದಲ್ಲಿ 2% ಹಣವನ್ನು ಸಾರಿಗೆ ಸಿಬ್ಬಂದಿಗಳಿಗೆ ಕೊಡತ್ತಿದ್ದರು.2% ಇನ್ಸೆಟಿವ್ ದುಡ್ಡು-ಕಲೆಕ್ಷನ್ ನಲ್ಲಿ 1% ಡ್ರೈವರ್ ಹಾಗೂ 1% ಕಂಡೆಕ್ಟರ್ ಗೆ ದುಡ್ಡು ಬರುತ್ತಿತ್ತು.ಆ ಹಣವನ್ನು ಸರ್ಕಾರ ಕೊಡಬೇಡು.ರೂಟ್ ನಲ್ಲಿ ತೆರಳುವ ಸಿಬ್ಬಂದಿಗಳಿಗೆ ಹೆಚ್ಚುವರಿ ಬಾಟಾ ಕೊಡಿ.ಇನ್ಸೆಟಿವ್ ದುಡ್ಡನ್ನು ಸರ್ಕಾರ ಕೊಡಬೇಕು.ಬಸ್ ಗಳ ಸಂಖ್ಯೆಯನ್ನು ಹೆಚ್ಚು ಮಾಡಿ  ಎಂದು ಕೆಎಸ್ ಆರ್ ಟಿಸಿ ಸ್ಟಾಫ್ ಆ್ಯಂಡ್ ವರ್ಕಸ್ ಫೆಡರೇಶನ್ ಅಧ್ಯಕ್ಷ ಅನಂತ ಸುಬ್ಬರಾವ್ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಮಾಜದ ಶಾಂತಿಯನ್ನ ಕದಡುತ್ತಾರೆ ,ಅವರ ಮೇಲೆ ಕ್ರಮ ಕೈಗೊಳ್ತಿವಿ -ಜಿ.ಪರಮೇಶ್ವರ್