Select Your Language

Notifications

webdunia
webdunia
webdunia
webdunia

ಕೆನಡಾದ ಸರಕಾರಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ವಂಚನೆ

Fraud that promises a manager
bangalore , ಸೋಮವಾರ, 13 ಸೆಪ್ಟಂಬರ್ 2021 (21:05 IST)
ಕೆನಡಾದ ಸರಕಾರಿ ಆಸ್ಪತ್ರೆಯಲ್ಲಿ ಮ್ಯಾನೇಜರ್ ಹುದ್ದೆ ಕೊಡಿಸುವುದಾಗಿ ಹೇಳಿ ಸೈಬರ್ ಖದೀಮನೊಬ್ಬ ಮಹಿಳೆಯೊಬ್ಬರಿಗೆ 18.41 ಲಕ್ಷ ರೂ. ವಂಚಿಸಿದ್ದಾನೆ. 
ರಾಜಾಜಿನಗರ 44 ವರ್ಷದ ಮಹಿಳೆ ವಂಚನೆಗೊಳಗಾದವರು. ಸೈಬರ್ ಖದೀಮ ಮಹಿಳೆಯನ್ನು ಸಾಮಾಜಿಕ ಜಾಲತಾಣದಲ್ಲಿ ಪರಿಚಯ ಮಾಡಿಕೊಂಡು ಬಳಿಕ ಅವರ ಮೊಬೈಲ್ ಸಂಖ್ಯೆ ಪಡೆದು ಚಾಟ್ ಪ್ರಾರಂಭಿಸಿದ್ದ. ವಾಟ್ಸ್ಯಾಪ್‍ನಲ್ಲಿ ಚಾಟ್ ಮಾಡುವ ವೇಳೆ ಉತ್ತಮ ಸಂಬಳವಿರುವ ಹುದ್ದೆ ಕೊಡಿಸುವುದಾಗಿ ನಂಬಿಸಿದ್ದ. 
 ಅದೇ ರೀತಿ ಇಬ್ಬರು ತುಂಬಾ ಪರಿಚಯವಾದ ಬಳಿಕ ಕೆನಡಾದ ಟೊರಾಂಟೊ ಜನರಲ್ ಆಸ್ಪತ್ರೆಯಲ್ಲಿ ವ್ಯವಸ್ಥಾಪಕರ ಹುದ್ದೆ ಖಾಲಿ ಇದೆ. ಕೈ ತುಂಬಾ ಸಂಬಳ ಸಿಗಲಿದೆ. ನೀವು ಬಯಸಿದರೆ ಹುದ್ದೆ ಕೊಡಿಸುವುದಾಗಿ ತಿಳಿಸಿದ್ದ. ಇದಕ್ಕೆ ಒಪ್ಪಿದ ಮಹಿಳೆಯಿಂದ ವೀಸಾ ಅಪ್ಲೀಕೇಷನ್ ಶುಲ್ಕ, ಪೆÇಲೀಸ್ ಪರಿಶೀಲನಾ ಪ್ರಮಾಣಪತ್ರ, ಮೆಡಿಕಲ್ ಸರ್ಟಿಫಿಕೇಟ್, ವಿಮಾ ಪಾಲಿಸಿ, ಬಯೋಮೆಟ್ರಿಕ್ ಎಂದು ನಾನಾ ಕಾರಣ ಹೇಳಿ ಹಂತ- ಹಂತವಾಗಿ 18.41 ಲಕ್ಷ ರೂ. ವಸೂಲಿ ಮಾಡಿದ್ದಾನೆ.
ಮತ್ತೆ ಮತ್ತೆ ಹಣ ಕೇಳಿದಾಗ ಅನುಮಾನ ಬಂದು ಮಹಿಳೆ ಈಗಾಗಲೇ ನೀಡಿರುವ ಹಣ ವಾಪಸ್ ನೀಡುವಂತೆ ಕೇಳಿದ್ದಾರೆ. ಕೊನೆಗೆ ಸೈಬರ್ ವಂಚಕ ಮೊಬೈಲ್ ಸಂಪರ್ಕ ಕಡಿತ ಮಾಡಿಕೊಂಡಿದ್ದಾನೆ. ನೊಂದ ಮಹಿಳೆ ಉತ್ತರ ವಿಭಾಗದ ಸಿಇಎನ್ ಠಾಣೆಗೆ ದೂರು ನೀಡಿರುವುದಾಗಿ ಪೆÇಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೆಲಸದ ಆಮಿಷವೊಡ್ಡಿ ಲಕ್ಷಾಂತರ ರೂ. ಪಡೆದು ಮೋಸ ಮಾಡುವ ಸೈಬರ್ ವಂಚಕರ ಜಾಲ ಸಕ್ರಿಯವಾಗಿದ್ದು, ಇಂತಹ ಹಲವು ಪ್ರಕರಣಗಳು ನಗರ ಸಿಇಎನ್ ಠಾಣೆಯಲ್ಲಿ ದಾಖಲಾಗಿವೆ.

Share this Story:

Follow Webdunia kannada

ಮುಂದಿನ ಸುದ್ದಿ

ತುಂಬಾ ಶೃಜನಶೀಲಾ ವ್ಯಕ್ತಿತ್ವದವರು ಶ್ರಿಯುತ ಆಸ್ಕರ್ ಪೆರ್ನಾಂಡಿಸ್