Webdunia - Bharat's app for daily news and videos

Install App

Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ

webdunia
ಶುಕ್ರವಾರ, 16 ಜುಲೈ 2021 (21:12 IST)
ಬೆಂಗಳೂರು: ರಾಜ್ಯದಲ್ಲಿ ಅಕ್ರಮವಾಗಿ ವಾಸವಾಗಿರುವ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚಲು ರಾಜ್ಯ ಸರ್ಕಾರವು ಪ್ರಧಾನ ಕಾರ್ಯದರ್ಶಿ ಅವರನ್ನು ಒಳಗೊಂಡ ಸಮಿತಿಯನ್ನು ರಚಿಸಿದೆ.
ಒಳನಾಡು ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಅಧ್ಯಕ್ಷರನ್ನಾಗಿ, ಪ್ರಾದೇಶಿಕ ವಿದೇಶಿ ನೋಂದಣಿ ಅಧಿಕಾರಿ, ರಾಜ್ಯ ಗುಪ್ತವಾರ್ತೆಯ ಪೊಲೀಸ್ ಅಧೀಕ್ಷಕ, ಜಿಲ್ಲಾ ವಿದೇಶಿ ನೋಂದಣಿ ಅಧಿಕಾರಿ, ಎನ್ ಐ ಸಿ ಪ್ರತಿನಿಧಿಯನ್ನು ಸದಸ್ಯರನ್ನಾಗಿ ಮಾಡಲಾಗಿದೆ.
ಈ ಸಮಿತಿಯು ಪ್ರಾದೇಶಿಕ ವಿದೇಶಿ ನೋಂದಣಿ ಅಧಿಕಾರಿ ಅವರ ಸಹಯೋಗದಲ್ಲಿ ವಿದೇಶಿ ಪ್ರಜೆಗಳನ್ನು ಪತ್ತೆ ಹಚ್ಚುವುದಲ್ಲದೇ, ಅವರ ದೇಶಕ್ಕೆ ಗಡಿಪಾರು ಮಾಡಲಿದೆ. ಅಕ್ರಮ ವಿದೇಶಿಗರ ಪತ್ತೆ ಹಚ್ಚಲು ಇ- ಎಫ್ ಆರ್ ಆರ್ ಒ ಸೌಲಭ್ಯ ಉಪಯೋಗಿಸಿಕೊಳ್ಳಲಿದೆ. ಪ್ರತಿ ತಿಂಗಳು ಪತ್ತೆ ಹಚ್ಚಿರುವವರ ಹಾಗೂ ಗಡಿಪಾರು ಮಾಡಿದವರ ವರದಿಯನ್ನು ಕೇಂದ್ರ ಗೃಹ ಮಂತ್ರಾಲಯಕ್ಕೆ ಸಲ್ಲಿಸಲಿದೆ.

ಸೂಕ್ತ ಸಂಗಾತಿ ಬೇಕಾ? ಕನ್ನಡ ಮ್ಯಾಟ್ರಿಮೊನಿಯಲ್ಲಿ - ನೋಂದಣಿ ಉಚಿತ!
Share this Story:

Follow Webdunia Hindi

ಮುಂದಿನ ಸುದ್ದಿ

ಇಬ್ಬರು ಬೈಕ್ ಕಳ್ಳರ ಬಂಧನ