ರಾಜ್ಯಸಭೆ ಚುನಾವಣೆಗೆ ಮತ ನೀಡಲು ಶಾಸಕರಿಂದ ಕೋಟಿ ಕೋಟಿ ಹಣದ ಬೇಡಿಕೆ ಪ್ರಕರಣ ದೇಶದ ಪ್ರಜಾಪ್ರಭುತ್ವಕ್ಕೆ ಕಪ್ಪು ಚುಕ್ಕಿ ಎಂದು ಸ್ಪೀಕರ್ ಕಾಗೋಡ ತಿಮ್ಮಪ್ಪ ಹೇಳಿದ್ದಾರೆ.
ಸಾಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸ್ಪೀಕರ್ ಕಾಗೋಡ ತಿಮ್ಮಪ್ಪ, ರಾಜ್ಯಸಭೆ ಚುನಾವಣೆಗೆ ಶಾಸಕರು ತಮ್ಮ ಮತಗಳನ್ನು ಮಾರಾಟ ಮಾಡುತ್ತಿರುವುದು ಬೇಸರದ ಸಂಗತಿ. ಈ ವಿಷಯ ಮಾಧ್ಯಮದ ಮೂಲಕ ನನ್ನ ಗಮನಕ್ಕೆ ಬಂದಿದೆ. ಈ ಪ್ರಕರಣ ಕುರಿತಂತೆ ಚುನಾವಣೆ ಆಯೋಗದ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದಾರೆ.
ರಾಜ್ಯಸಭೆ ಚುನಾವಣೆಗೆ ರಾಜಕೀಯ ಪಕ್ಷಗಳು ಹಣವಂತರು ಮತ್ತು ಉದ್ಯಮಿಗಳಿಗೆ ಟಿಕೆಟ್ ನೀಡುವುದನ್ನು ನಿಲ್ಲಿಸಬೇಕು. ಸಮಾಜ ಸೇವಕರು ಮತ್ತು ಪ್ರಾಮಾಣಿಕರಿಗೆ ಮಾತ್ರ ಟಿಕೆಟ್ ನೀಡಬೇಕು. ಆಗ ಮಾತ್ರ ಇಂತಹ ಪ್ರಕರಣಗಳಿಗೆ ಕಡಿವಾಣ ಹಾಕಬಹುದು ಎಂದು ಸ್ಪೀಕರ್ ಕಾಗೋಡ ತಿಮ್ಮಪ್ಪ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.