Publish Date: Thu, 08 Sep 2022 (12:58 IST)
Updated Date: Thu, 08 Sep 2022 (12:56 IST)
ಮಂಡ್ಯ : ಪಾಂಡವಪುರದ ಮಾಜಿ ಶಾಸಕ ಕೆ.ಕೆಂಪೇಗೌಡ (96) ಅವರು ಇಂದು ನಿಧನರಾಗಿದ್ದಾರೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಕೆಂಪೇಗೌಡ ಅವರು, ಗುರುವಾರ ಬೆಳಗಿನ ಜಾವ ಸ್ವಗ್ರಾಮದ ತೋಟದ ಮನೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಪಾಂಡವಪುರ ಕ್ಷೇತ್ರದಿಂದ ಕೆಂಪೇಗೌಡ ಅವರು ಮೂರು ಬಾರಿ ಶಾಸಕರಾಗಿದ್ದರು.
1983 ರಲ್ಲಿ ಜನತಾಪರಿವಾರದಿಂದ ಗೆಲುವು ಸಾಧಿಸಿದ್ದರು. 1985 ರಲ್ಲಿ ಪಕ್ಷೇತರವಾಗಿ ಗೆದ್ದಿದ್ದರು. 1999 ರಲ್ಲಿ ಕಾಂಗ್ರೆಸ್ ಪಕ್ಷದಿಂದ ಜಯ ಸಾಧಿಸಿದ್ದರು.
ಆದರೆ ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕೆ.ಕೆಂಪೇಗೌಡ ಅವರು ಹಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಉಳಿದಿದ್ದರು.