Publish Date: Fri, 25 Mar 2022 (07:33 IST)
Updated Date: Fri, 25 Mar 2022 (08:35 IST)
ನೀರಾವರಿ ವಿಷಯದಲ್ಲಿ ರಾಜ್ಯಕ್ಕೆ ಅನ್ಯಾಯ ಆಗುತ್ತಲೇ ಇದೆ.
ಗೋದಾವರಿ, ಕೃಷ್ಣಾ, ಪೆನ್ನಾರ್ ಮತ್ತು ಕಾವೇರಿ ನದಿ ಜೋಡಣೆ ಯೋಜನೆಯಲ್ಲಿ ರಾಜ್ಯಕ್ಕೆ ಸೊನ್ನೆ ಸುತ್ತಲಾಗಿದೆ.
ಈಗಾಗಲೇ ಕೇಂದ್ರದಲ್ಲಿ ಒಂದು ಸಭೆ ಮಾಡಿ ಕರ್ನಾಟಕವನ್ನು ಲೆಕ್ಕಕ್ಕೆ ಇಡದೇ ತೆಲಂಗಾಣ, ಆಂಧ್ರ, ತಮಿಳುನಾಡು ಮತ್ತು ಪುದುಚೇರಿ ರಾಜ್ಯಗಳು ಮಾತ್ರ ನೀರು ಹಂಚಿಕೊಂಡಿವೆ.
ಇದೇ ಕಾರಣಕ್ಕಾಗಿಯೇ ನದಿ ಜೋಡಣೆ ವಿಚಾರದಲ್ಲಿ ಕನ್ನಡಿಗರು ತಬ್ಬಲಿಗಳು ಆಗುತ್ತಿದ್ದಾರೆ ಎಂದು ಜನತಾ ಪತ್ರಿಕೆ ಯಲ್ಲಿ ಸ್ವತಃ ದೇವೇಗೌಡರೇ ಬರೆದಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.
ಈ ಸಂದರ್ಭದಲ್ಲಿ ದೇವೇಗೌಡರು ಜನತಾ ಪತ್ರಿಕೆಯಲ್ಲಿ ಬರೆದಿರುವ ಲೇಖನವನ್ನು ಪ್ರದರ್ಶಿಸಿದರು.