Select Your Language

Notifications

webdunia
webdunia
webdunia
webdunia

ಕೋಲಾರ ಕ್ಷೇತ್ರದಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ...!

Former CM Siddaramaiah's contest from Kolar Constituency
ವಿಷೇಷ ಬಸ್ ಮೂಲಕ ಸಿದ್ದರಾಮಯ್ಯ ಕೋಲಾರಕ್ಕೆ ಪ್ರಯಾಣ ಬೆಳೆಸಿದ್ದಾರೆ.ಕೋಲಾರದಲ್ಲಿಯೇ ಇಡಿ ದಿನ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ.ಮಾಜಿ ಸ್ಪೀಕರ್ ರಮೇಶ್ ಕುಮಾರ್ , ಮಾಜಿ ಸಂಸದ ಕೆ.ಎಚ್ ಮುನಿಯಪ್ಪ ಸಿದ್ದರಾಮಯ್ಯಗೆ ಸಾಥ್ ನೀಡಿದ್ದಾರೆ.ಎಲ್ಲಾ ಸಮುದಾಯಗಳ ಮುಖಂಡರ ಜೊತೆ ಸಿದ್ದರಾಮಯ್ಯ  ಚರ್ಚೆಮಾಡಲಿದ್ದಾರೆ.ಕೋಲಾರ ಕ್ಷೇತ್ರದಿಂದಲೇ ಸ್ಪರ್ಧೆ ಮಾಡುವ ಸುಳಿವನ್ನ ಈಗಾಗಲೇ ಸಿದ್ದು ನೀಡಿದ್ದಾರೆ.
 
ಕೋಲಾರಕ್ಕೆ ತೆರಳುವ ಮುನ್ನವೇ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದು. ಎಲ್ಲರು ಒಟ್ಟಾಗಿ ಹೋಗಬೇಕು, ಅದಕ್ಕಾಗಿ ಬಸ್ಸಿನಲ್ಲಿ ಹೋಗ್ತಿದ್ದೇವೆ.ಕೋಲಾರದವರು ನನ್ನನ್ನು ಕರೀತೀದ್ದಾರೆ.ಅಲ್ಲಿ  ಶ್ರೀನಿವಾಸ್ ಗೌಡ ನಿಲ್ಲಲ್ಲ, ಅದಕ್ಕೆ ನೀವು ನಿಲ್ಲಿ ಅಂತಿದ್ದಾರೆ.ಅನೇಕ ಕಡೆಗಳಲ್ಲೂ ಕರೀತಿದ್ದಾರೆ.ಅದಕ್ಕಾಗಿ ಅಲ್ಲಿ ಪರಿಶೀಲನೆ ಮಾಡಲು ಕೋಲಾರಕ್ಕೆ ಹೋಗ್ತಿದ್ದೇನೆ.ಅಂತಿಮವಾಗಿ ಹೈಕಮಾಂಡ್ ಯಾವ ತೀರ್ಮಾನ ಮಾಡುತ್ತದೋ ಅಲ್ಲಿ ಸ್ಪರ್ಧೆ ಮಾಡ್ತೀನಿ .ಬಾದಾಮಿ, ವರುಣಾ, ಚಾಮರಾಜಪೇಟೆಯಲ್ಲೂ ಸ್ಪರ್ಧೆಗೆ ಒತ್ತಡ ಇದೆ.ಆದರೆ ಕೋಲಾರದಲ್ಲಿ ಜಾಸ್ತಿ ಒತ್ತಡ ಇದೆ.ಅದಕ್ಕಾಗಿ ನಾನು ಇಂದು ಅಲ್ಲಿಗೆ ಹೋಗ್ತಿದ್ದೇನೆ.ಇಂದು ಅಲ್ಲಿನ ಸ್ಥಳೀಯ ನಾಯಕರ ಜೊತೆ ಚರ್ಚಿಸಿ ಸೂಕ್ತ ತೀರ್ಮಾನ ಮಾಡ್ತೀನಿ ಎಂದ ಸಿದ್ದರಾಮಯ್ಯ ಹೇಳಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಟೆಂಪೋ ಟ್ರಾವೆಲರ್ ಡಿಕ್ಕಿಯಾದ ಪರಿಣಾಮ ದ್ವಿಚಕ್ರ ವಾಹನಸವಾರ ಸ್ಥಳದಲ್ಲೇ ಸಾವು