ರಾಜ್ಯದ ಸಮ್ಮಿಶ್ರ ಸರಕಾರದಲ್ಲಿ ಶಾಸಕರು ತೀವ್ರ ಅಸಮಾಧಾನಗೊಂಡಿದ್ದಾರೆ. ಈಗ ಅದು ಸ್ಫೋಟಗೊಂಡಿದ್ದು, ರಾಜೀನಾಮೆ ಪರ್ವ ಶುರುವಾಗಿದೆ ಅಂತ ಮಾಜಿ ಸಿಎಂ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಪ್ರತಿಕ್ರಿಯೆ ನೀಡಿದ್ದು, ರಾಜ್ಯದಲ್ಲಿರುವ ಮೈತ್ರಿ ಸರಕಾರದಲ್ಲಿ ರಾಜೀನಾಮೆ ಪರ್ವ ಶುರುವಾಗಿದೆ. ಯಾವುದೇ ಕ್ಷಣದಲ್ಲಿಯೂ ರಾಜ್ಯ ಸರಕಾರ ಪತನಗೊಳ್ಳಲಿದೆ ಎಂದರು.
ಭಿನ್ನಾಭಿಪ್ರಾಯ ಕಾಂಗ್ರೆಸ್ ಹಾಗೂ ಜೆಡಿಎಸ್ ಶಾಸಕರಲ್ಲಿದೆ. ಇನ್ನು ಹೆಚ್ಚು ಶಾಸಕರು ಮೈತ್ರಿ ಸರಕಾರವನ್ನು ತೊರೆದು ರಾಜೀನಾಮೆ ಕೊಡುತ್ತಾರೆ ಎನ್ನೋದನ್ನು ನೋಡಬೇಕು ಎಂದರು.
ಶಾಸಕ ಆನಂದ ಸಿಂಗ್ ಈಗ ರಾಜೀನಾಮೆ ನೀಡಿದ್ದಾರೆ. ಮುಂದೆ ಹಲವಾರು ಶಾಸಕರು ರಾಜೀನಾಮೆ ಮುಂದಾಗಲಿದ್ದಾರೆ ಎಂದು ಹೇಳಿದ್ರು.
ಲೋಕಸಭೆ ಚುನಾವಣೆ ಫಲಿತಾಂಶದ ಬಳಿಕ ಸಿಎಂ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕಿತ್ತು. ಆದರೆ ಅದು ಆಗಲಿಲ್ಲ. ರಾಜ್ಯದ ಸಮ್ಮಿಶ್ರ ಸರಕಾರ ತನ್ನಿಂದ ತಾನೇ ಪತನವಾಗುತ್ತದೆ. ಅಲ್ಲಿವರೆಗೂ ನಾವು ಕಾಯ್ದು ನೋಡುತ್ತೇವೆ ಎಂದರು.