Publish Date: Sat, 26 Mar 2016 (16:06 IST)
Updated Date: Sat, 26 Mar 2016 (16:10 IST)
ಹುಬ್ಬಳಿ: ಕಳಸಾ ಬಂಡೂರಿ ಮಹದಾಯಿ ಯೋಜನೆಯ ಕುರಿತು ಏಪ್ರಿಲ್ 2 ರಂದು ಸಿಎಂ ಆಯೋಜಿಸಿರುವ ಸಭೆಯಲ್ಲಿ ನಾನು ಪಾಲ್ಗೊಳುತ್ತೇನೆ. ಆದರೆ, ಯೋಜನೆ ಕುರಿತು ಮುಖ್ಯಮಂತ್ರಿಯವರು ಸಂಧಾನ ಸಭೆ ಆರಂಭಿಸಲಿ ಎಲ್ಲವನ್ನು ಪ್ರಧಾನಿ ಮೋದಿಯವರ ತಲೆಗೆ ಕಟ್ಟುವುದು ಸರಿಯಲ್ಲ ಎಂದು ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಹೇಳಿದ್ದಾರೆ.
ರಾಜ್ಯದಲ್ಲಿ 40 ವರ್ಷಗಳಿಂದ ಕಾಣದಂತಹ ಬರಗಾಲ ಪರಿಸ್ಥಿತಿ ಬಂದಿದೆ, ಆದರು ಬರ ಪರಿಸ್ಥಿತಿಯನ್ನು ಸರಕಾರ ಗಂಭೀರವಾಗಿ ಪರಿಗಣಿಸಿಲ್ಲ ಎಂದು ಹುಬ್ಬಳಿಯಲ್ಲಿ ರಾಜ್ಯ ಸರಕಾರದ ವಿರುದ್ಧ ಹರಿಹಾಯ್ದಿದ್ದಾರೆ.
ಇದುವರೆಗೂ ಕೇಂದ್ರ ಸರಕಾರ 192 ಕೋಟಿಯಷ್ಟು ಹಣವನ್ನು ರಾಜ್ಯಕ್ಕೆ ಬಿಡುಗಡೆ ಮಾಡಿದೆ. ಆದರೆ ಸರಕಾರ ಈ ಹಣವನ್ನು ಜನಪರ ಯೋಜನೆಗಾಗಿ ಖರ್ಚು ಮಾಡಲು ವಿಫಲವಾಗಿದೆ. ಈ ಕುರಿತು ಲೆಕ್ಕ ಕೇಳಿದರೆ ತನ್ನ ವೈಪಲ್ಯವನ್ನು ಮುಚ್ಚಿಟ್ಟುಗೊಳ್ಳುವ ಪ್ರಯತ್ನ ನಡೆಸುತ್ತಿದೆ ಎಂದು ಹೇಳಿದ್ದಾರೆ
ಆಡಳಿತ ಸರಕಾರ ತಮ್ಮ ಭ್ರಷ್ಟಾಚಾರ ಮುಚ್ಚಿಕೊಳ್ಳಲು ಲೋಕಾಯುಕ್ತ ಸಂಸ್ಥೆಯನ್ನು ಮುಚ್ಚಲು ಹೊರಟಿದ್ದು, ಸರಕಾರದ ಈ ನಡೆ ವಿರೋಧಿಸಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ತಿಳಿಸಿದ್ದಾರೆ.