Daily Horoscope
✕

ಧ್ವನಿವರ್ಧಕ ಆದೇಶ ಪಾಲಿಸಿ, ಖಡಕ್ ಎಚ್ಚರಿಕೆ ನೀಡಿದ ಕಮಲ್ ಪಂಥ್

Webdunia
ಮಂಗಳವಾರ, 5 ಏಪ್ರಿಲ್ 2022 (17:01 IST)
ಪ್ರಾರ್ಥನಾ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಹೈಕೋರ್ಟ್ ನೀಡಿರುವ ಆದೇಶವನ್ನು ಉಲ್ಲಂಘನೆ ಮಾಡಿದರೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್‍ಪಂತ್ ಇಂದಿಲ್ಲಿ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಸೀದಿ, ಪ್ರಾರ್ಥನಾ ಮಂದಿರ ಸೇರಿದಂತೆ ವಿವಿಧ ಸ್ಥಳಗಳಲ್ಲಿ ಧ್ವನಿವರ್ಧಕ ಬಳಸುವ ಬಗ್ಗೆ ಕಳೆದ ಆರು ತಿಂಗಳ ಹಿಂದೆಯೇ ಹೈಕೋರ್ಟ್ ಆದೇಶ ನೀಡಿದೆ. ಮಸೀದಿ, ಮಂದಿರ ಮಾತ್ರವಲ್ಲ, ಕಾರ್ಖಾನೆ, ಪಬ್‍ಗಳಿಗೂ ಕೂಡ ನೋಟಿಸ್ ನೀಡಲಾಗಿದೆ. ಧರ್ಮ ಮುಖಂಡರ ಜತೆ ಸಭೆ ನಡೆಸಿ ಅವರಿಗೂ ಮಾರ್ಗದರ್ಶನ ನೀಡಲಾಗಿದೆ. ಅದರಂತೆ ಧರ್ಮಗುರುಗಳು ನಡೆದುಕೊಂಡಿದ್ದಾರೆ ಎಂದರು.
 
ಮಾಲಿನ್ಯ ನಿಯಂತ್ರಣ ಮಂಡಳಿಯೂ ಈ ಬಗ್ಗೆ ಸುತ್ತೋಲೆ ಹೊರಡಿಸಿದೆ. ನಗರದಲ್ಲಿ ಈಗಾಗಲೇ ಹಲವು ಕಡೆ ಮೈಕ್‍ಗಳನ್ನು ಜಪ್ತಿ ಮಾಡಲಾಗಿದೆ. ಅಲ್ಲದೆ, 40ಕ್ಕೂ ಅಕ ಪ್ರಕರಣಗಳನ್ನು ದಾಖಲಿಸಲಾಗಿದೆ. ಕಾನೂನು ಉಲ್ಲಂಘಿಸಿದರೆ ಮುಂದೆಯೂ ಸಹ ಮೈಕ್‍ಗಳನ್ನು ಜಪ್ತಿ ಮಾಡುತ್ತೇವೆ. ಯಾರಾದರೂ ಕಾನೂನು ಉಲ್ಲಂಘಿಸಿದರೆ ಕ್ರಮ ಕೈಗೊಳ್ಳುವುದಾಗಿ ಕಮಲ್‍ಪಂತ್ ಅವರು ಎಚ್ಚರಿಸಿದರು. ಎಲ್ಲರೂ ಶಾಂತಿ-ಸುವ್ಯವಸ್ಥೆ ಕಾಪಾಡಿಕೊಂಡು ಜೀವನ ನಡೆಸಬೇಕು ಎಂದು ಅವರು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುಸ್ಲಿಂ ಟೋಪಿ ಧರಿಸಿ ತಿರುವಣ್ಣಾಮಲೈ ದೇವಸ್ಥಾನಕ್ಕೆ ಬಂದ ಸಚಿವರ ಸಹಾಯಕ: ಹೊರನಡೆಯಿರಿ ಎಂದು ಭಕ್ತರ ಆಕ್ರೋಶ Video

ಮಸೀದಿ ಚರ್ಚ್ ನಲ್ಲಿ ಓಂ ಬಿಡಿಸಲು ಬಿಡ್ತೀರಾ: ಅರ್ಕೇಶ್ವರ ದೇವಸ್ಥಾನದ ಗೋಡೆ ಮೇಲೆ ಮಸೀದಿ, ಶಿಲುಬೆ ಚಿತ್ರಕ್ಕೆ ಆಕ್ರೋಶ Video

ಪಾಸ್ಪೋರ್ಟ್ ಕಳೆದುಹೋಗಿದೆಯೇ, ಆತಂಕ ಪಡಬೇಡಿ, ತಕ್ಷಣವೇ ಈ ಪ್ರಮುಖ ಹಂತಗಳನ್ನು ಅನುಸರಿಸಿ

ಸಿಜೆಪಿ, ಕಾಂಗ್ರೆಸ್ ಎಸ್ಐಆರ್ ಪ್ರತಿಭಟನೆ ನಡುವೆ ಹೈರಾಣಾಗಿದ್ದು ವ್ಯಾಪಾರಿಗಳು: ದೆಹಲಿ ವ್ಯಾಪಾರಿಗಳ ಆಕ್ರೋಶಕ್ಕೆ ಕಾರಣವೇನು

ದೆಹಲಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಬೃಹತ್ ರ‍್ಯಾಲಿ: ಎಸ್‌ಐಆರ್ ವಿವಾದದ ಪ್ರತಿಭಟನೆಗೆ ಗ್ರೀನ್ ಸಿಗ್ನಲ್

ಮುಂದಿನ ಸುದ್ದಿ
Show comments