Select Your Language

Notifications

webdunia
webdunia
webdunia
Friday, 4 April 2025
webdunia

ಸ್ವದೇಶಿ ಜಾಗರಣ ಮಂಚ್ ಉದ್ಘಾಟನೆ

Cm
ಬೆಂಗಳೂರು , ಮಂಗಳವಾರ, 5 ಏಪ್ರಿಲ್ 2022 (14:32 IST)
ಸ್ವದೇಶಿ ಜಾಗರಣ ಮಂಚ್ (ಕರ್ನಾಟಕ), ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಯೋಗದೊಂದಿಗೆ ಏ. 6ರಿಂದ 10ರವರೆಗೆ 'ಸ್ವದೇಶಿ ಮೇಳ' ಆಯೋಜಿಸಲಾಗಿದೆ. ಜಯನಗರದ ಚಂದ್ರಗುಪ್ತ ಮೌರ್ಯ ಆಟದ ಮೈದಾನದಲ್ಲಿ ನಡೆಯಲಿರುವ ಮೇಳದ ಪ್ರಾಯೋಜಕತ್ವವನ್ನು ವಿಜಯವಾಣಿ ವಹಿಸಿದೆ.
ಎರಡು ದಶಕದಿಂದ ಸ್ವದೇಶಿ ಮೇಳವನ್ನು ಆಯೋಜಿಸಲಾಗುತ್ತಿದೆ. ದೇಸಿ ಉತ್ಪನ್ನಗಳನ್ನು ಜನರಿಗೆ ತಲುಪಿಸುವುದು ಹಾಗೂ ಈ ಉತ್ಪಾದಕ ಕಂಪನಿಗಳಿಗೆ ಮಾರುಕಟ್ಟೆಯನ್ನು ಒದಗಿಸುವುದು ಇದರ ಮುಖ್ಯ ಉದ್ದೇಶದ. ಮೇಳದಲ್ಲಿ 220 ಮಳಿಗೆಗಳಿರಲಿದ್ದು, ದೇಶದ ವಿವಿಧ ರಾಜ್ಯಗಳಿಂದ ಮಾರಾಟಗಾರರು ಭಾಗವಹಿಸಲಿದ್ದಾರೆ. ಇಲ್ಲಿ ವಿದೇಶಿ ಉತ್ಪನ್ನಗಳಿಗೆ ಅವಕಾಶವಿಲ್ಲ. ಸಾರ್ವಜನಿಕರಿಗೆ ಉಚಿತ ಪ್ರವೇಶ ಕಲ್ಪಿಸಲಾಗಿದೆ ಎಂದರು.

Share this Story:

Follow Webdunia kannada

ಮುಂದಿನ ಸುದ್ದಿ

ಕಾನೂನು ಎಲ್ಲರಿಗೂ ಒಂದೇ- ಗೃಹ ಸಚಿವ ಅರಗ ಜ್ಞಾನೇಂದ್ರ