Select Your Language

Notifications

webdunia
webdunia
webdunia
webdunia

ಲಾಲ್​​​​ಬಾಗ್​​​​​ನಲ್ಲಿ ಹೂವಿನ ಲೋಕ ಅನಾವರಣ

ಲಾಲ್​​​​ಬಾಗ್​​​​​ನಲ್ಲಿ ಹೂವಿನ ಲೋಕ ಅನಾವರಣ
bangalore , ಶನಿವಾರ, 5 ಆಗಸ್ಟ್ 2023 (20:20 IST)
ಕರ್ನಾಟಕದ ಶಕ್ತಿ ಕೇಂದ್ರ ವಿಧಾನಸೌಧ ನಿರ್ಮಾತೃ ಕೆಂಗಲ್ ಹನುಮಂತಯ್ಯ ಅವರ ಸ್ಮರಣಾರ್ಥ ಲಾಲ್‌ಬಾಗ್‌ನಲ್ಲಿ ಆಯೋಜಿಸಿರುವ ಸ್ವಾತಂತ್ರೋತ್ಸವದ ಫಲಪುಷ್ಪ ಪ್ರದರ್ಶನಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ಸಂಜೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು, ಲಾಲ್‌ಬಾಗ್ ಉದ್ಯಾನವು ಇಡೀ ವಿಶ್ವದಲ್ಲಿಯೇ ಪ್ರಸಿದ್ಧವಾಗಿದೆ. ಸುಮಾರು 240 ಎಕರೆ ವಿಸ್ತೀರ್ಣದಲ್ಲಿದ್ದು, ವಿವಿಧ ಜಾತಿಯ ಮರ ಗಿಡಗಳಿವೆ. ಬ್ರಿಟಿಷರ ಕಾಲದಲ್ಲಿ 140 ಎಕರೆ ಪ್ರದೇಶದಲ್ಲಿದ್ದ ಉದ್ಯಾನವು ಕೆಂಗಲ್ ಹನುಮಂತಯ್ಯ ಅವರು 100 ಎಕರೆ ಪ್ರದೇಶವನ್ನು ಸ್ವಾಧೀನಪಡಿಸಿಕೊಂಡು, 240 ಎಕರೆಗೆ ವಿಸ್ತರಿಸಿದ್ದರು ಎಂದು ತಿಳಿಸಿದರು. ತೋಟಗಾರಿಕೆ ಇಲಾಖೆ ಆಯೋಜಿಸಿರುವ 214ನೇ ಫಲಪುಷ್ಪ ಪ್ರದರ್ಶನ ಇದಾಗಿದೆ. ಹಚ್ಚ ಹಸಿರಿನಿಂದ ಕಂಗೊಳಿಸುತ್ತಿರುವ ಸಸ್ಯಕಾಶಿ ಲಾಲ್‌ಬಾಗ್‌ನಲ್ಲಿ ಫಲಪುಷ್ಪ ಪ್ರದರ್ಶನ ಸಾರ್ವಜನಿಕರಿಗೆ ಮುಕ್ತವಾಗಿರಲಿದೆ. ಇದೇ 15ರವರೆಗೂ ಈ ಹೂವಿನ ಲೋಕವನ್ನು ಕಣ್ಣುಂಬಿಕೊಳ್ಳಬಹುದು.
 
ಗಾಜಿನ ಮನೆಯ ಕೇಂದ್ರ ಭಾಗದಲ್ಲಿ ವಿಧಾನಸೌಧ ಮಾದರಿ 7.2 ಲಕ್ಷ ವಿವಿಧ ತಳಿಯ ಪುಷ್ಪಗಳಲ್ಲಿ ಕಂಗೊಳಿಸುತ್ತಿದೆ. ಅದರ ಮುಂಭಾಗದಲ್ಲಿ ಕೆಂಗಲ್ ಹನುಮಂತಯ್ಯ ಅವರ 14 ಅಡಿ ಎತ್ತರದ ಪ್ರತಿಮೆಯು ನೋಡುಗರನ್ನು ಸೆಳೆಯುತ್ತಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾವು ಬಡವರ ಪರ, ಬಿಜೆಪಿ ಬಡವರ ವಿರೋಧ ಇಷ್ಟೇ ವ್ಯತ್ಯಾಸ