ಪ್ರಕೃತಿ ಮತ್ತು ಜೀವವೈವಿಧ್ಯ ಎಂದಿಗೂ ಮುಗಿಯದಂಥ ಅನೇಕ ಅಚ್ಚರಿಗಳನ್ನು ತನ್ನ ಗರ್ಭದಲ್ಲಿ ಅಡಗಿಸಿಕೊಂಡಿರುತ್ತದೆ. ಇದೀಗ ವೈರಲ್ ಆಗಿರುವ ಈ ವಿಡಿಯೋದಲ್ಲಿ ಹಕ್ಕಿಗಳ ಸುಂದರ ದೃಶ್ಯವಿದೆ. ಒಡಿಶಾದಲ್ಲಿ ವಲಸೆ ಹಕ್ಕಿಗಳ ಸುಸಮಯ ಶುರುವಾಗಿದೆ. ಚಿಲಿಕಾ ಸರೋವರದಲ್ಲಿ ಈಗ ಈ ಹಕ್ಕಿಗಳ ಕಲರವ ನೋಡಬಹುದಾಗಿದೆ. AIS ಅಧಿಕಾರಿ ಸುಶಾಂತ್ ನಂದಾ ಈ ವಿಡಿಯೋ ಹಂಚಿಕೊಂಡ ನಂತರ ವೈರಲ್ ಆಗುತ್ತಿದೆ. ಕೆಳಗೆ ನೀರು, ಮೇಲೆ ಬಾನು ನಡುವೆ ವಲಸೆ ಹಕ್ಕಿಗಳ ಹಾರಾಟ. 16 ಸೆಕೆಂಡುಗಳ ಈ ದೃಶ್ಯ ನೋಡುಗರನ್ನು ಅನುಪಮ ಜಗತ್ತಿಗೆ ಕರೆದೊಯ್ಯುತ್ತಿದೆ. ಹಕ್ಕಿಗಳಿಗೆ ಈ ಚಿಲಿಕಾ ಸ್ವರ್ಗವೇ ಸರಿ. ಸಂತಾನೋತ್ಪತ್ತಿಗೆ ಸೂಕ್ತವಾದ ಜಾಗವನ್ನು ಹುಡುಕಿಕೊಂಡು ಅದಕ್ಕೆ ಬೇಕಾದ ತಯಾರಿಯಲ್ಲಿ ಮುಳುಗಿವೆ ಈ ಹಕ್ಕಿಗಳು. ಪ್ರಶಾಂತವಾದ ಜಾಗ, ಗೂಡು ಕಟ್ಟಲು ಎಲೆ, ನಾರುಗಳ ಸಂಗ್ರಹಣೆ ಹೀಗೆ ಭವಿಷ್ಯದ ಕೆಲಸಗಳಲ್ಲಿ ತನ್ಮಯವಾಗಿವೆ. ಇವುಗಳು ಹೀಗೆ ಈ ಚಟುವಟಿಕೆಯಲ್ಲಿ ತೊಡಗಿಕೊಂಡಿರುವುದನ್ನು ನೋಡುವುದೇ ಚೆಂದ. ಹಲವಾರು ಜನರು ಈ ವಿಡಿಯೋ ವೀಕ್ಷಿಸಿದ್ದಾರೆ. ಅನೇಕರು ಪ್ರತಿಕ್ರಿಯಿಸಿದ್ದಾರೆ.