Webdunia - Bharat's app for daily news and videos

Install App

ಸ್ಲೀಪರ್ ಬಸ್‌ನಲ್ಲಿಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ!

Webdunia
ಭಾನುವಾರ, 28 ನವೆಂಬರ್ 2021 (11:22 IST)
ಮಂಗಳೂರು : ಮದುವೆಯಾಗುವುದಾಗಿ ನಂಬಿಸಿ ದಲಿತ ಬಾಲಕಿಯ ಮೇಲೆ ಸ್ಲೀಪರ್ ಬಸ್ನಲ್ಲಿ ಅತ್ಯಾಚಾರ ನಡೆಸಿದ್ದ ಆರೋಪಿ ಬೆಳ್ತಂಗಡಿ ತಾಲೂಕು ಕೇಪು ಗ್ರಾಮದ ನೀರ್ಕಜೆಯ ನಿತಿನ್ (27) ಎಂಬಾತನಿಗೆ 7 ವರ್ಷ ಕಠಿಣ ಸಜೆ ಮತ್ತು 15 ಸಾವಿರ ರೂ. ದಂಡ ವಿಧಿಸಿ ಮಂಗಳೂರಿನ ಒಂದನೇ ತ್ವರಿತ ಗತಿ ಸೆಷನ್ಸ್ ನ್ಯಾಯಾಲಯ ತೀರ್ಪು ನೀಡಿದೆ.
ಬಾಲಕಿಯನ್ನು ಅಪಹರಣ ಮಾಡಿದ ತಪ್ಪಿಗಾಗಿ ಐಪಿಸಿ 366ಎ ಅಡಿಯಲ್ಲಿ 3 ವರ್ಷ ಕಠಿಣ ಶಿಕ್ಷೆ ಮತ್ತು 5000 ರೂ. ದಂಡ ಹಾಗೂ ದಂಡ ತೆರಲು ತಪ್ಪಿದರೆ 15 ದಿನಗಳ ಕಠಿಣ ಶಿಕ್ಷೆ, ಅತ್ಯಾಚಾರ ಆರೋಪಕ್ಕೆ ಐಪಿಸಿ 376 ಮತ್ತು ಪೋಕ್ಸೊ ಸೆಕ್ಷನ್ ಕಲಂ 4ರ ಅಡಿಯಲ್ಲಿ7 ವರ್ಷ ಕಠಿಣ ಸಜೆ ಮತ್ತು 10 ಸಾವಿರ ರೂ. ದಂಡ ಹಾಗೂ ದಂಡ ಪಾವತಿಸಲು ತಪ್ಪಿದರೆ 2 ತಿಂಗಳ ಹೆಚ್ಚುವರಿ ಕಠಿಣ ಸಜೆಯನ್ನು ಅನುಭವಿಸಬೇಕಿದೆ. ಖಾಸಗಿ ಬಸ್ ನಿರ್ವಾಹಕನಾಗಿದ್ದ ಆರೋಪಿ ನಿತಿನ್ಗೆ ಆತ ಕಾರ್ಯ ನಿರ್ವಹಿಸುತ್ತಿದ್ದ ಬಸ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದ 17 ವರ್ಷ ಪ್ರಾಯದ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯ ಪರಿಚಯವಾಗಿತ್ತು. ಈ ಪರಿಚಯ ಮುಂದೆ ಫೋನ್ನಲ್ಲಿ ನಿರಂತರ ಮಾತುಕತೆಗೆ ಕಾರಣವಾಗಿತ್ತು.
ಈ ಮಧ್ಯೆ ಕಾಲೇಜಿಗೆಂದು ಹೋಗಿದ್ದ ತಮ್ಮ ಪುತ್ರಿ ಮನೆಗೆ ವಾಪಸಾಗದ ಕಾರಣ ಬಾಲಕಿಯ ಹೆತ್ತವರು ವಿಟ್ಲ ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರಿಗೆ ಬಾಲಕಿ ನಿತಿನ್ ಜತೆಗೆ ಬೆಂಗಳೂರಿಗೆ ತೆರಳಿದ ಬಗ್ಗೆ ಸುಳಿವು ಲಭಿಸಿತ್ತು.
ಈ ಹಿನ್ನೆಲೆಯಲ್ಲಿ ಪೊಲೀಸರು ಬೆಂಗಳೂರಿಗೆ ತೆರಳಿ ಆರೋಪಿಯನ್ನು ಬಂಧಿಸಿದ್ದರು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಒಂದನೇ ತ್ವರಿತಗತಿ ಸೆಷನ್ಸ್ ನ್ಯಾಯಾಲಯದ ನ್ಯಾಯಾಧೀಶರಾದ ಸಾವಿತ್ರಿ ವಿ.ಭಟ್ ಪ್ರಕರಣದ ವಿಚಾರಣೆ ನಡೆಸಿ ಗುರುವಾರ ಆರೋಪ ಸಾಬೀತಾಗಿದೆ ಎಂದು ತೀರ್ಪು ಪ್ರಕಟಿಸಿದ್ದರು. ಶನಿವಾರ ಶಿಕ್ಷೆಯ ಪ್ರಮಾಣ ಪ್ರಕಟಿಸಿದರು.

 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮೋದಿ ದೇಶ ಬದಲಾಯಿಸಿದ್ದರೆ, ಕಾಂಗ್ರೆಸ್ ಒಡೆದು ಆಳುತ್ತಿದೆ: ಜೆಪಿ ನಡ್ಡಾ

ಛೀ ಇದೆಂಥಾ ಅನಾಚಾರ.. ಚಿಕನ್ ಬಿರಿಯಾನಿ ಬೇಯಿಸುತ್ತಿರುವ ಗಣೇಶನ ಬ್ಯಾನರ್: Video

ಕರ್ನಾಟಕ ಹವಾಮಾನ ವರದಿ: ದಕ್ಷಿಣ ಒಳನಾಡಿನ ಜಿಲ್ಲೆಗಳಿಗೆ ಭಾರಿ ಮಳೆ ಎಚ್ಚರಿಕೆ, IMD ನೀಡಿದ ಹೊಸ ಸಿಹಿ ಸುದ್ದಿ

ಉಮರ್ ಖಾಲಿದ್ ದೇಶಭಕ್ತ, ಗಾಡ್ಸೆ ದೇಶದ ಮೊದಲ ಭಯೋತ್ಪಾದಕ: ಬಿಕೆ ಹರಿಪ್ರಸಾದ್

ದೇಶಕ್ಕಿಂತ, ಪಕ್ಷವೇ ಮುಖ್ಯವಾಯ್ತಾ, ಬ್ರಿಕ್ಸ್ ಔತಣಕೂಟಕ್ಕೆ ಕರೆದರೂ ಹೋಗದ ಕಾಂಗ್ರೆಸ್ ಸಿಎಂಗಳ ವಿರುದ್ಧ ಆಕ್ರೋಶ

ಮುಂದಿನ ಸುದ್ದಿ
Show comments