Select Your Language

Notifications

webdunia
webdunia
webdunia
webdunia

ಮೊದಲ ಮಹಿಳಾ ಕನ್ನಡ ಶಾಲೆ

ಮೊದಲ ಮಹಿಳಾ ಕನ್ನಡ ಶಾಲೆ
ಮೈಸೂರು , ಮಂಗಳವಾರ, 8 ಫೆಬ್ರವರಿ 2022 (08:24 IST)
ಮೈಸೂರು : ಕಳೆದ 15 ವರ್ಷಗಳಿಂದ ಮೈಸೂರಿನಲ್ಲಿ ವಿವೇಕ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ವಿವಾದಿತ ಪ್ರದೇಶವಾಗಿದ್ದ ಎನ್ಟಿಎಂಎಸ್ ಶಾಲೆಯ ಕಟ್ಟಡವನ್ನು ಕೊನೆಗೂ ರಾತ್ರೋರಾತ್ರಿ ಧ್ವಂಸ ಮಾಡಲಾಗಿದೆ.

ಈ ಮೂಲಕ ಕರ್ನಾಟಕ ಮೊದಲ ಮಹಿಳಾ ಕನ್ನಡ ಶಾಲೆ ಇತಿಹಾಸ ಪುಟ ಸೇರಿದೆ. ರಾಜ್ಯ ಸರ್ಕಾರ ಶಾಲೆಯ ಜಾಗವನ್ನು ವಿವೇಕ ಸ್ಮಾರಕ ನಿರ್ಮಾಣಕ್ಕಾಗಿ ರಾಮಕೃಷ್ಣ ಆಶ್ರಮಕ್ಕೆ ಹಸ್ತಾಂತರ ಮಾಡಿತ್ತು.

ಇದನ್ನು ಕೆಲ ಸಂಘಟನೆಗಳು ಪ್ರಶ್ನಿಸಿ ಹೈಕೋರ್ಟ್ಗೆ ದಾವೆ ಹೂಡಿದ್ದವು. ಹೈಕೋರ್ಟ್ನಲ್ಲಿ ರಾಮಕೃಷ್ಣ ಆಶ್ರಮದ ಪರ ತೀರ್ಪು ಬಂದಿತ್ತು. ಹೀಗಾಗಿ ಒಂದು ವಾರದ ಹಿಂದೆ ಶಾಲೆಯನ್ನು ಪಕ್ಕದ ಮಹಾರಾಣಿ ಕಾಲೇಜಿಗೆ ಶಿಫ್ಟ್ ಮಾಡಲಾಗಿತ್ತು.

ನಿನ್ನೆ ಇಡೀ ರಾತ್ರಿ ಡಿಸಿಪಿ ಗೀತಾ ಪ್ರಸನ್ನ, ಎಸಿಪಿ ಶಶಿಧರ್, 5 ಸರ್ಕಲ್ ಇನ್ಸ್ ಪೆಕ್ಟರ್ ಸೇರಿ ಸುಮಾರು 250ಕ್ಕೂ ಹೆಚ್ಚು ಪೊಲೀಸ್ ಭದ್ರತೆಯಲ್ಲಿ ಶಾಲಾ ಕಟ್ಟಡ ತೆರವು ಕಾರ್ಯಾಚರಣೆ ನಡೆದಿದೆ.


Share this Story:

Follow Webdunia kannada

ಮುಂದಿನ ಸುದ್ದಿ

ತನ್ವೀರ್ ಸೇಠ್ ಆಸ್ಪತ್ರೆಗೆ ದಾಖಲು