Webdunia - Bharat's app for daily news and videos

Install App

ದೇಶದಲ್ಲೇ ಮೊದಲ ಯಶಸ್ವಿ “ಕೃತಕ ಹೃದಯ ಉಪಕರಣ” ತೆರವುಗೊಳೊಸಿದ ಶಸ್ತ್ರಚಿಕಿತ್ಸೆ

Webdunia
ಮಂಗಳವಾರ, 5 ಅಕ್ಟೋಬರ್ 2021 (20:53 IST)
ಹೃದಯ ವೈಫಲ್ಯ ಹೊಂದಿದವರಿಗೆ ಅಳವಡಿಸುವ ಕೃತಕ ಹೃದಯ ಉಪಕರಣವನ್ನು ಯಶಸ್ವಿಯಾಗಿ ತೆಗೆದು ಹಾಕುವ ಶಸ್ತ್ರಚಿಕಿತ್ಸೆಯನ್ನು ಫೋರ್ಟಿಸ್ ಆಸ್ಪತ್ರೆ ನಡೆಸಿದ್ದು, ಇದು ದೇಶದಲ್ಲೇ ಮೊದಲ ಶಸ್ತ್ರಚಿಕಿತ್ಸೆಯಾಗಿದೆ!. 
 
ಈ ಕುರಿತು ಮಂಗಳವಾರ ವರ್ಚುವಲ್ ಮೂಲಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ನೋಯ್ಡ ಫೋರ್ಟಿಸ್ ಹಾರ್ಟ್ ಆಂಡ್ ವ್ಯಾಸ್ಕಲರ್ ಇನ್‌ಸ್ಟಿಟ್ಯೂಟ್ ಅಧ್ಯಕ್ಷ ಡಾ. ಅಜಯ್ ಕೌಲ್, ಭಾರತದಲ್ಲೇ ಇದೇ ಮೊದಲ ಬಾರಿಗೆ,  ವ್ಯಕ್ತಿಗೆ ಅಳವಡಿಸಲಾಗಿದ್ದ ಕೃತಕ ಹೃದಯವನ್ನು ಸಂಪೂರ್ಣವಾಗಿ ತೆಗೆದುಹಾಕುವ ಶಸ್ತ್ರಚಿಕಿತ್ಸೆ ನಡೆಸಿದ್ದೇವೆ. ವಿಶ್ವದಲ್ಲಿಯೇ ಇಂಥ ಶಸ್ತ್ರಚಿಕಿತ್ಸೆ ಅತ್ಯಂತ ವಿರಳವಾದದ್ದು ಎಂದು ಹೇಳಿದರು.
 
ಪ್ರಕರಣದ ವಿವರ: ಇರಾನ್ ದೇಶದ 56 ವರ್ಷ ವಯಸ್ಸಿನ ಪುರುಷ ರೋಗಿಯು ಸಂಪೂರ್ಣ ಹೃದಯ ವೈಫಲ್ಯದ ಸಮಸ್ಯೆ ಅನುಭವಿಸುತ್ತಿದ್ದರು. ಇವರಿಗೆ ಹೃದಯ ಕಸಿ ಅನಿರ್ವಾಯವಾಗಿತ್ತು. ಆದರೆ, ಹೃದಯ ದಾನ ಮಾಡುವವರ ಕೊರತೆಯಿಂದ ಕೆಲ ತಿಂಗಳುಗಳ ಕಾಲ ಚಿಕಿತ್ಸೆಯಲ್ಲೇ ಮುಂದುವರೆದಿದ್ದರು.  ಆದರೆ, ಪರಿಸ್ಥಿತಿ ಕೈ ಮೀರಿದ ಬಳಿಕ ಅವರಿಗೆ ಕೃತಕ ಹೃದಯ ಅಳವಡಿಕೆ ಮಾಡಲು ನಿರ್ಧರಿಸಿ “ಲೆಫ್ಟ್ ವೆಂಟ್ರಿಕುಲರ್ ಅಸಿಸ್ಟ್  ಡಿವೈಸ್” (ಎಲ್‌ವಿಎಡಿ) ರಕ್ತ ಪಂಪ್ ಮಾಡುವ ಡಿವೈಸ್‌ನನ್ನು ಅಳವಡಿಸಲಾಯಿತು. ಇದನ್ನು ಕೃತಕ ಹೃದಯದ ಎನ್ನಲಾಗುವುದು. ಸಾಮಾನ್ಯವಾಗಿ ಕೃತಕ ಹೃದಯ ಅಳವಡಿಸಿದ ಬಳಿಕ ಅದು ಹಾಗೇ ಮುಂದುವರೆಯಬೇಕಾಗುತ್ತದೆ. ಇದರ ಸಹಾಯವಿಲ್ಲದೇ ಹೃದಯ ಪಂಪ್ ಆಗುವುದಿಲ್ಲ.  ಆದರೆ, ಈ ಪ್ರಕರಣದಲ್ಲಿ, ರೋಗಿಯು ಕೃತಕ ಹೃದಯದ ಮೂಲಕ ಕಾಲ ಕ್ರಮೇಣ ಇವರ ಹೃದಯ ಗುಣವಾಗುತ್ತಾ ಬಂದಿತ್ತು. ಎಲ್‌ವಿಎಡಿ ಸಹಾಯವಿಲ್ಲದೇ ಹೃದಯ ಪಂಪ್ ಆಗುತ್ತಿತ್ತು. ಹೀಗಾಗಿ ಕೃತಕ ಹೃದಯವನ್ನು ಸಂಕೀರ್ಣ ಚಿಕಿತ್ಸೆ ಮೂಲಕ ತೆಗೆದು ಹಾಕುವುದು ವೈದ್ಯಕೀಯ ಕ್ಷೇತ್ರಕ್ಕೇ ದೊಡ್ಡ ಸವಾಲಾಗಿತ್ತು. ಆದರೆ, ನಮ್ಮ ತಂಡ, ಹೊಸ ಪ್ರಯೋಗದೊಂದಿಗೆ 12 ಗಂಟೆಗಳ ಶಸ್ತ್ರಚಿಕಿತ್ಸೆಯ ತರುವಾಯ ಯಶಸ್ವಿಯಾಗಿ ಕೃತಕ ಹೃದಯವನ್ನು ತೆಗೆದು ಹಾಕಲಾಗಿದೆ. ಈ ಶಸ್ತ್ರಚಿಕಿತ್ಸೆ ದೇಶದಲ್ಲೇ ಮೊದಲ ಬಾರಿಗೆ ನಡೆಸಲಾಗಿದೆ. ಈ ಶಸ್ತ್ರಚಿಕಿತ್ಸೆ ಬಳಿಕ ರೋಗಿಯು ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ. ಇದು ನಮ್ಮ ಫೋರ್ಟಿಸ್ ಆಸ್ಪತ್ರೆ ವೈದ್ಯರ ತಂಡಕ್ಕೆ ಸಂದ ಜಯವಾಗಿದೆ ಎಂದು ವಿವರಿಸಿದರು.
health

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments