ಅಧಿಕೃತವಾಗಿ ಸಂಜೆ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ.ಸಿದ್ದರಾಮಯ್ಯ ಸಿಎಂ, ಶಿವಕುಮಾರ್ ಡಿಸಿಎಂ ಇಬ್ಬರೂ ನಾಯಕರ ಆಯ್ಕೆ ಸಂತೋಷ ತಂದಿದೆ .ದಲಿತ ಡಿಸಿಎಂ ವಿಚಾರವಾಗಿ ಸಂಜೆ ಚರ್ಚೆ ಮಾಡ್ತಾರೆ ಎಂದು ಶಾಸಕ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಅಲ್ಲದೆ ಪರಮೇಶ್ವರ್ ದುಡಿದಿದ್ದಾರೆ, ಶ್ರಮ ಪಟ್ಟಿದ್ದಾರೆ.ಹೈಕಮಾಂಡ್ ಈ ಬಗ್ಗೆ ನಿರ್ಧಾರ ಮಾಡುತ್ತೆ.ನಾನೂ ಸಚಿವ ಸ್ಥಾನದ ಆಕಾಂಕ್ಷಿ, ಸಚಿವ ಸ್ಥಾನ ನೀಡುವ ನೀರೀಕ್ಷೆ ಇದೆ.ಮೊದಲು ಸಚಿವ ಸ್ಥಾನ ಸಿಗಲಿ ನಂತರ ಖಾತೆ ಬಗ್ಗೆ ನೋಡೋಣ ಎಂದು ಶಿವರಾಜ್ ತಂಗಡಗಿ ಹೇಳಿದ್ದಾರೆ.