Publish Date: Thu, 09 Apr 2026 (19:01 IST)
Updated Date: Thu, 09 Apr 2026 (19:09 IST)
ಬಳ್ಳಾರಿ: ಬಳ್ಳಾರಿ ಸೆಂಟ್ರಲ್ ಜೈಲಿನ ಶಿಕ್ಷಾ ಬಂಧಿಯೊಬ್ಬ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಫಸ್ಟ್ ಕ್ಲಾಸ್‌ನಲ್ಲಿ ತೇರ್ಗಡಿಯಾಗಿದ್ದಾನೆ.
ಅಶೋಕ್ ಕುಮಾರ್ ಎಂಬ ಶಿಕ್ಷಾಬಂಧಿ 600ಕ್ಕೆ 481 ಅಂಕಗಳನ್ನು ಪಡೆದು ಸಾಧನೆಯನ್ನು ಮಾಡಿದ್ದಾರೆ.
ಕನ್ನಡದಲ್ಲಿ 82, ಇಂಗ್ಲಿಷ್ 69, ಇತಿಹಾಸ 94, ಅರ್ತಶಾಸ್ತ್ರ 84, ಸಮಾಜಶಾಸ್ತ್ರ 77, ರಾಜ್ಯಶಾಸ್ತ್ರ75 ಅಂಕ ಗಳಿಸಿದ್ದಾನೆ. ಇನ್ನು ಅಶೋಕ್ ಕುಮಾರ್‌ಗೆ ಪ್ರತ್ಯೇಕ ಸೆಲ್‌ನಲ್ಲಿ ಅಭ್ಯಾಸವನ್ನು ಮಾಡುತ್ತಿದ್ದ.
ಕೊಲೆ ಆರೋಪದಲ್ಲಿ ಕಳೆದ 7 ವರ್ಷಗಳಿಂದ ಈತ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದಾನೆ. ಕೊಲೆ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆಯಾಗಿ ಜೈಲಿನಲ್ಲಿದ್ದಾನೆ.
ಇನ್ನೂ ಶಿಕ್ಷೆಗೆ ಗುರಿಯಾಗಿದ್ದರು, ಓದಿನಲ್ಲಿ ಆಸಕ್ತಿ ಹೊಂದಿದಾತ ಓದುವ ಅಭ್ಯಾಸ ರೂಢಿಸಿಕೊಂಡಿದ್ದ. ಹೀಗಾಗಿ, ಖಾಸಗಿ ಅಭ್ಯರ್ಥಿಯಾಗಿ ಪರೀಕ್ಷೆ ಬರೆದು ಫಸ್ಟ್ ಕ್ಲಾಸ್‌ನಲ್ಲಿ ಪಾಸಾಗಿದ್ದಾನೆ.