Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಭಾರಿ ಅಗ್ನಿ ಅಕಸ್ಮಿಕ: ಇಬ್ಬರು ಕಾರ್ಮಿಕರ ಸಾವು

ಕುರ್ಚಿ ತಯಾರಿಕೆ ಫ್ಯಾಕ್ಟರಿ
ಬೆಂಗಳೂರು , ಶುಕ್ರವಾರ, 31 ಮಾರ್ಚ್ 2017 (15:09 IST)
ಬೆಂಗಳೂರು: ಮೈಸೂರು ರಸ್ತೆಯ ವಿನಾಯಗರದಲ್ಲಿರುವ ಕುರ್ಚಿ ತಯಾರಿಕೆ ಫ್ಯಾಕ್ಟರಿಯಲ್ಲಿ ಅಗ್ನಿ ಅಕಸ್ಮಿಕ ಸಂಭವಿಸಿದ್ದು, ಫ್ಯಾಕ್ಟರಿಯೊಳಗಡೆ ಕಾರ್ಮಿಕರು ಸಿಲುಕಿದ್ದಾರೆ. ಇಬ್ಬರು ಕಾರ್ಮಿಕರು ಸಾವನ್ನಪ್ಪಿದ್ದಾರೆ ಎಂದು ಮೂಲಗಳು ತಿಳಿಸಿವೆ.
 
ಕುರ್ಚಿ ತಯಾರಿಕೆ ಫ್ಯಾಕ್ಟರಿಯಲ್ಲಿ ಅಗ್ನಿ ಅಕಸ್ಮಿಕ ಸಂಭವಿಸಿದ್ದು ಒಳಗಡೆ ನಾಲ್ವರು ಕಾರ್ಮಿಕರು ಸಿಲುಕಿದ್ದಾರೆ, ಕಾರ್ಮಿಕರ ರಕ್ಷಣೆಗಾಗಿ 10 ಅಗ್ನಿಶಾಮಕ ದಳ ವಾಹನಗಳು ಆಗಮಿಸಿದ್ದು ಹರಸಾಹಸ ಪಡುತ್ತಿದೆ ಎಂದು ಮೂಲಗಳು ತಿಳಿಸಿವೆ.
 
ಶಾರ್ಟ್‌ಸರ್ಕ್ಯೂಟ್‌ನಿಂದ ಫ್ಯಾಕ್ಟರಿಯಲ್ಲಿ ಅಗ್ನಿ ಅಕಸ್ಮಿಕ ಸಂಭವಿಸಿದೆ. ನಾಲ್ವರು ಕಾರ್ಮಿರ ರಕ್ಷಣೆಗೆ ಹೆಚ್ಚಿನ ಒತ್ತು ನೀಡಲಾಗಿದೆ ಎಂದು ಅಗ್ನಿಶಾಮಕ ದಳ ಅಧಿಕಾರಿಗಳು ತಿಳಿಸಿದ್ದಾರೆ. 
 
ಘಟನಾ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ಧಾವಿಸಿದ್ದು, ಫ್ಯಾಕ್ಟರಿಯ ಹೊರಗಡೆ ನೆರೆದಿರುವ ಜನರನ್ನು ಚದುರಿಸಲು ಪ್ರಯತ್ನಿಸುತ್ತಿದ್ದಾರೆ. ಹೆಚ್ಚಿನ ಬಂದೋಬಸ್ತ್‌ಗಾಗಿ ಪೊಲೀಸ್ ಪಡೆಯನ್ನು ರವಾನಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೆಎಂಎಫ್ ಹಾಲಿನ ದರ ಹೆಚ್ಚಳ: ಸಚಿವ ಮಂಜು ಸಮರ್ಥನೆ