Select Your Language

Notifications

webdunia
webdunia
webdunia
webdunia

ಮೈಸೂರಿನ ಬಳಿ ಕೊತ ಕೊತ ಕುದಿಯುತ್ತಿರುವ ಭೂಮಿ: ಬಾಲಕ ಬಲಿ

ಮೈಸೂರಿನ ಬಳಿ ಕೊತ ಕೊತ ಕುದಿಯುತ್ತಿರುವ ಭೂಮಿ: ಬಾಲಕ ಬಲಿ
ಮೈಸೂರು , ಸೋಮವಾರ, 17 ಏಪ್ರಿಲ್ 2017 (10:22 IST)
ಮೈಸೂರು ಬಳಿಯ ಗ್ರಾಮವೊಂದರ ಭೂಮಿಯಲ್ಲಿ ಕೊತ ಕೊತ ಕುದಿಯುವ ಬೆಂಕಿ ಕಾಣಿಸಿಕೊಂಡು ಬಹಿರ್ದೆಸೆಗೆ ತೆರಳಿದ್ದ 15 ವರ್ಷದ ಬಾಲಕ ಹರ್ಷಲ್ ಎಂಬಾತ ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಸಾವನ್ನಪ್ಪಿದ್ದಾನೆ.

ಗ್ರಾಮದ ಸೋಮಣ್ಣ ಎಂಬುವರ ಜಮೀನಿನಲ್ಲಿ ಈ ಘಟನೆ ನಡೆದಿದ್ದು, ಸ್ಥಳಕ್ಕೆ ಪರಿಸರ ತಜ್ಞರು ಭೇಟಿ ನೀಡಿ ಮಣ್ಣಿನ ಮಾದರಿ ಸಂಗ್ರಹಿಸಿ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ. ಹಲವು ವರ್ಷಗಳಿಂದ ರಾಸಾಯನಿಕ ತ್ಯಾಜ್ಯವನ್ನ ಇಲ್ಲಿ ಸುರಿದಿದ್ದು, ರಾಸಾಯನಿಕ ತ್ಯಾಜ್ಯ ಮಣ್ಣಿನ ಜೊತೆ ಸೇರಿ ಬೆಂಕಿ ಉಗುಳುತ್ತಿದೆ.

ಕಳೆದ ಹಲವು ದಿನಗಳಿಂದಲೂ ಈ ಬೆಂಕಿಯ ಬಗ್ಗೆ ಗ್ರಾಮದ ಜನರ ಗಮನಕ್ಕೆ ಬಂದಿದೆ. ವಾರದ ಹಿಂದಷ್ಟೇ ವ್ಯಕ್ತಿಯೊಬ್ಬ ಈ ಬೆಂಕಿಯಿಂದ ಕಾಲು ಸುಟ್ಟುಕೊಂಡು ಆಸ್ಪತ್ರೆ ಸೇರಿದ್ದಾನೆ. ಹಸು, ಆಡುಗಳು ಸಹ ಈ ಬೆಂಕಿ ಕೆನ್ನಾಲಿಗಗೆ ಬಲಿಯಾಗಿವೆ ಎಂಬ ಮಾಹಿತಿ ಸಿಕ್ಕಿದೆ. ಸದ್ಯ, ಸ್ಥಳದಲ್ಲಿ 100 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿದ್ದು, ಸುತ್ತಮುತ್ತ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಸುಮೋಟೋ ಕೇಸ್ ದಾಖಲಿಸಿಕೊಮಡಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸ್ನ್ಯಾಪ್ ಚ್ಯಾಟ್ ಬದಲು ಸ್ನಾಪ್ ಡೀಲ್ ಗೆ ಬಹಿಷ್ಕಾರ ಹಾಕುತ್ತಿರುವ ಜನತೆ!