Select Your Language

Notifications

webdunia
webdunia
webdunia
webdunia

‘ರಾಜ್ಯದಲ್ಲಿ ಬೆಂಕಿ ಹಾಕಿ ದಿಲ್ಲಿಯಲ್ಲಿ ಕುಳಿತ ಗೃಹಸಚಿವ’

‘ರಾಜ್ಯದಲ್ಲಿ ಬೆಂಕಿ ಹಾಕಿ ದಿಲ್ಲಿಯಲ್ಲಿ ಕುಳಿತ ಗೃಹಸಚಿವ’
ಮಂಗಳೂರು , ಭಾನುವಾರ, 22 ಡಿಸೆಂಬರ್ 2019 (17:24 IST)
ರಾಜ್ಯದ ಗೃಹಸಚಿವ ಮಂಗಳೂರಲ್ಲಿ ಬೆಂಕಿ ಹಾಕಿ ದಿಲ್ಲಿಲಿ ಹೋಗಿ ಕುಳಿತಿದ್ದಾರೆ.

ಹೀಗಂತ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಟೀಕೆ ಮಾಡಿದ್ದಾರೆ. ಕೇಂದ್ರ ಸರಕಾರದ ಪ್ರಮುಖ ಎರಡು ವಿಧೇಯಕಗಳ ವಿರುದ್ಧ ದೇಶದಲ್ಲಿ ಪ್ರತಿಭಟನೆ ನಡೆಯುತ್ತಿದೆ. ಕರ್ನಾಟಕ ಮೊದಲಿನಿಂದಲೂ ಶಾಂತಿ ಪ್ರಿಯ ರಾಜ್ಯ, ಇಂತಹ ರಾಜ್ಯದಲ್ಲಿ ವಿಧೇಯಕದ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ.

ಗುಲ್ಬರ್ಗದಲ್ಲಿ ಶಾಂತಿ ಪ್ರತಿಭಟನೆ ನಡೆಯಿತು. ಮಂಗಳೂರಿನಲ್ಲಿ ಕರ್ಪ್ಯೂ ಇತ್ತು, ಆದರ ಹಿನ್ನೆಲೆಯಲ್ಲಿ ಇವತ್ತು ಘಟನೆ ಬಗ್ಗೆ ವಾಸ್ತವ ಅರಿಯಲು ಬಂದಿದ್ದೇನೆ ಎಂದರು.

ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ದಕ್ಷಿಣ ಕನ್ನಡ ಮೊದಲಿಂದಲೂ ಕೋಮು ಗಲಭೆ ನಡೆಯುತ್ತಿತ್ತು, ಆದರೆ ಇದು ಕೋಮು ಗಲಭೆ ಅಲ್ಲ. ಗುಂಡೇಟಿನಿಂದ ಮಾರಣಾಂತಿಕ ಗಾಯಗೊಂಡರ ಬಗ್ಗೆ ಮಾಹಿತಿ ನೀಡಿಲ್ಲ, ಇದು ಅನಾಗರಿಕ ವರ್ತನೆ ಅಂತ ಸರಕಾರದ ವಿರುದ್ಧ ಕಿಡಿಕಾರಿದ್ರು.

ರಾಜ್ಯದ ಇತರ ಕಡೆ ಶಾಂತಿಯುತ ಪ್ರತಿಭಟನೆ ಆಗಿದೆ, ಆದ್ರೆ ಮಂಗಳೂರಿನಲ್ಲಿ ಈ ರೀತಿ ಏಕೆ ಆಗಿದೆ?

ಪೊಲೀಸ್ ಇಲಾಖೆಯವರು ಯಾಕೆ ಲಾಠಿ ಚಾರ್ಜ್ ಮಾಡಿದ್ದಾರೆ? ಇಬ್ಬರು ಅಮಾಯಕರು ಬಲಿಯಾದವರು ಗಲಭೆ ಮಾಡಲು‌ ಬಂದವರೇ? ಪೊಲೀಸ್ ಇಲಾಖೆ ಕಮಿಷನರ್ ಹೇಳಿಕೆಯಲ್ಲಿ ತಪ್ಪುಗಳಿವೆ. ಮಕ್ಕಳನ್ನು ಮನೆಗೆ ಬಿಟ್ಟು ಹೊರಗೆ ಬಂದವರು ಗುಂಡೇಟಿಗೆ ಬಲಿಯಾಗಿದ್ದಾರೆ ಅಂತ ಕುಮಾರಸ್ವಾಮಿ ಹೇಳಿದ್ದಾರೆ.




Share this Story:

Follow Webdunia kannada

ಮುಂದಿನ ಸುದ್ದಿ

ಬೈ ಎಲೆಕ್ಷನ್ ಗೆದ್ದೋರು ಸ್ವೀಕರಿಸಿದ್ರು ಪ್ರಮಾಣ ವಚನ