ತಾನು ಕೆಲಸ ಮಾಡುತ್ತಿರುವ ಠಾಣೆಯಲ್ಲೇ ಪೊಲೀಸಪ್ಪನ ವಿರುದ್ಧವೇ ಎಫೈಆರ್ ದಾಖಲಾಗಿರುವ ಪ್ರಕರಣ ಬೆಂಗಳೂರಿನ ಬಾಣಸವಾಡಿಯಲ್ಲಿ ಬೆಳಕಿಗೆ ಬಂದಿದೆ. ಸಿಪಿಐ ಮುನಿಕೃಷ್ಣ ಸೇರಿ 18 ಜನರ ವಿರುದ್ಧ ಈ ಕುರಿತು ದೂರು ದಾಖಲಾಗಿದೆ.
ಏನಿದು ಪ್ರಕರಣ..?: ಸಿಪಿಐ ಮುನಿಕೃಷ್ಣ ರಿಯಲ್ ಎಸ್ಟೇಟ್ ಕುಳಗಳ ಜೊತೆ ನಕಲಿ ನಕಲಿ ದಾಖಲೆ ಸೃಷ್ಟಿಸಿದ್ದಾರೆ. ನ್ಯಾಯ ಕೇಳಲು ಬಂದಾಗ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆಂದು ನಾಗನಹಳ್ಳಿ ನಿವಾಸಿ ಫೆಲಿನಾ ಹರಿಪ್ರಸಾದ್ ಕೋರ್ಟ್`ಗೆ ದೂರು ನೀಡಿದ್ದರು.
ವಿಚಾರಣೆ ನಡೆಸಿದ ಕೋರ್ಟ್ ಇದೀಗ ಸಿಪಿಐ ಸೇರಿ 18 ಜನರ ವಿರುದ್ಧ ಎಫೈಆರ್ ದಾಖಲಿಸಲು ಆದೇಶಿಸಿದೆ.