Select Your Language

Notifications

webdunia
webdunia
webdunia
webdunia

ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್

ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್
ಬೆಂಗಳೂರು , ಗುರುವಾರ, 22 ಡಿಸೆಂಬರ್ 2016 (12:33 IST)
ರಾಜಧಾನಿ ಬೆಂಗಳೂರಿನ ಕೆಂಗೇರಿ ಬಳಿ ನಿವೇಶನ ನೀಡುವುದಾಗಿ ಹೇಳಿ ವಂಚನೆ ಮಾಡಿದ ಆರೋಪದ ಮೇಲೆ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ
ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ.
 
ಕೆಂಗೇರಿ ಬಳಿ ನಿವೇಶನ ನೀಡುವುದಾಗಿ ಹೇಳಿ, 1995 ರಿಂದಲೂ ಸಾರ್ವಜನಿಕರಿಂದ ಹಣ ಪಡೆದು ಇದುವರೆಗೂ ನಿವೇಶನ ನೀಡದ ಆರೋಪವನ್ನು ಸಿ.ಪಿ.ಯೋಗೇಶ್ವರ್ ಎದುರಿಸುತ್ತಿದ್ದಾರೆ.
 
ಮೆಗಾ ಟೌನ್‌ಶಿಫ್‌ನಲ್ಲಿ ನಿವೇಶನ ಪಡೆಯಲು ನೂರಾರು ಮಂದಿ ಹಣ ಹೂಡಿದ್ದರು. ಆದರೆ, ಇದುವರೆಗೂ ಯಾರಿಗೂ ನಿವೇಶನ ನೀಡದೆ ಇದ್ದು, ಹಾಗೂ ನೀಡಿದ ಹಣವನ್ನು ಹಿಂದಿರುಗಿಸದ ಹಿನ್ನೆಲೆಯಲ್ಲಿ ಶಾಸಕ ಸಿ.ಪಿ.ಯೋಗೇಶ್ವರ್ ವಿರುದ್ಧ ಸಂಪಂಗಿ ರಾಮನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನನ್ನ ರಕ್ತದ ಕಣಕಣದಲ್ಲೂ ಕಾಂಗ್ರೆಸ್ ಬೆರೆತಿದೆ: ಪೂಜಾರಿ