Publish Date: Sun, 13 Feb 2022 (17:04 IST)
Updated Date: Sun, 13 Feb 2022 (18:09 IST)
ಹಲ್ಲೆ ಹಾಗೂ ಬೆದರಿಕೆ ಆರೋಪದ ಹಿನ್ನೆಲೆ ವಕೀಲ ಜಗದೀಶ್ ಪುತ್ರನ ವಿರುದ್ಧ ಎಫ್ಐಆರ್ ದಾಖಲಾಗಿದೆ.ಪುನೀತ್ ಕೆರೆ ಹಳ್ಳಿ ಎಂಬುವರು ನೀಡಿದ ದೂರಿನ ಮೇರೆಗೆ ವಕೀಲ ಜಗದೀಶ್ ಅವರ ಪುತ್ರ ಆರ್ಯಗೌಡ ಮೇಲೆ ಕೊಡಿಗೇಹಳ್ಳಿ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಕಾಲೇಜಿನ ಬಳಿ ಹೋದಾಗ ಪುನೀತ್ ಕೆರೆಹಳ್ಳಿ ಮೇಲೆ ಹಲ್ಲೆ ಮಾಡಿ ಕೊಲೆ ಬೆದರಿಕೆ ಹಾಕಿರುವ ಆರೋಪ ಕೇಳಿ ಬಂದಿದೆ. ಸದ್ಯ ಕೋರ್ಟ್ ಆದೇಶದ ಮೇರೆಗೆ ಆರ್ಯಗೌಡ ಮೇಲೆ ವಿವಿಧ ಕಾಯ್ದೆಗಳ ಅಡಿಯಲ್ಲಿ ಪೊಲೀಸರು ಎಫ್ಐಆರ್ ದಾಖ ಲಿಸಿದ್ದಾರೆ.