Select Your Language

Notifications

webdunia
webdunia
webdunia
webdunia

ನೋಂದಣಿ ನೇಮ್ ಪ್ಲೇಟ್ ಕಾಣದಂತೆ ಸ್ಟಿಕ್ಟರ್ ಅಳವಡಿಸಿ ಓಡಾಡಿಸುತ್ತಿದ್ದ ವಾಹನಗಳಿಗೆ ದಂಡ

Putturu Traffic Rules Viotion
Photo Credit X
ಪುತ್ತೂರು: ವಾಹನದ ಕಿಟಕಿ ಗಾಜುಗಳ ಮೇಲೆ ಚಾಲಕನ ದೃಷ್ಟಿಗೆ ಅಡ್ಡಿಯಾಗುವಂತಹ ಸ್ಟಿಕ್ಕರ್‌ಗಳನ್ನು ಅಂಟಿಸುವುದು ಹಾಗೂ ನೋಂದಣಿ ಸಂಖ್ಯೆ ಕಾಣದಂತೆ ನಂಬರ್ ಪ್ಲೇಟ್‌ಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸುವ ಮೂಲಕ ಸಂಚಾರ ನಿಯಮಗಳನ್ನು ಉಲ್ಲಂಘಿಸಿದ ಹಲವಾರು ವಾಹನಗಳಿಗೆ ಪುತ್ತೂರು ಸಂಚಾರ ಪೊಲೀಸರು ದಂಡ ವಿಧಿಸಿದ್ದಾರೆ.

ಈ ಕುರಿತು ಪೊಲೀಸ್ ಇಲಾಖೆಯು ಸಾರ್ವಜನಿಕರಿಗೆ ಕಠಿಣ ಎಚ್ಚರಿಕೆ ನೀಡಿದೆ.

ಹಬ್ಬಗಳು, ಸಂಭ್ರಮಾಚರಣೆಗಳು ಅಥವಾ ಇತರೆ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ನೆಪದಲ್ಲಿ ಸಂಚಾರ ನಿಯಮಗಳನ್ನು
ಉಲ್ಲಂಘಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೂಟಿ ಮಾಡಿದ ಹಣ ರಾಹುಲ್ ಗಾಂಧಿಯವರ ಮನೆಗೆ: ಬಿ.ಶ್ರೀರಾಮುಲು