ಕೊನೆಗೂ ಫೇಲಾಗಿದ್ದ ಯುಕೆಜಿ ವಿದ್ಯಾರ್ಥಿ ಪಾಸ್!

Webdunia
ಮಂಗಳವಾರ, 21 ಫೆಬ್ರವರಿ 2023 (17:04 IST)
UKG ವಿದ್ಯಾರ್ಥಿಯನ್ನು ಫೇಲ್ ಮಾಡಿದ್ದಕ್ಕಾಗಿ ಪೋಷಕರು ಮತ್ತು ರಾಜಕಾರಣಿಗಳಿಂದ ತೀವ್ರ ಆಕ್ರೋಶದ ನಂತರ ಎಚ್ಚೆತ್ತುಕೊಂಡ ಬೆಂಗಳೂರಿನ ಶಾಲೆಯೊಂದು ಅಂತಿಮವಾಗಿ ವಿದ್ಯಾರ್ಥಿಯ ಫಲಿತಾಂಶವನ್ನು ಪರಿಷ್ಕರಿಸಿದ್ದು, ಪಾಸ್ ಮಾಡಿದೆ. ಆನೇಕಲ್‌ನ ಸೇಂಟ್ ಜೋಸೆಫ್ ಚಾಮಿನಾಡೆ ಅಕಾಡೆಮಿಯಲ್ಲಿ ವ್ಯಾಸಂಗ ಮಾಡುತ್ತಿರುವ ಯುಕೆಜಿ ವಿದ್ಯಾರ್ಥಿಯ ಪೋಷಕರಾದ ಮನೋಜ್ ಬಾದಲ್, ಶಾಲೆಯು ಅಂತಿಮವಾಗಿ ಫಲಿತಾಂಶವನ್ನು ಪರಿಷ್ಕರಿಸಿದ್ದು, ಆಕೆಯ ರಿಪೋರ್ಟ್ ಕಾರ್ಡ್‌ನಿಂದ ‘ಫೇಲ್’ ಪದವನ್ನು ತೆಗೆದುಹಾಕಿದೆ ಎಂದು ಹೇಳಿದ್ದಾರೆ. ಈ ತಿಂಗಳ ಆರಂಭದಲ್ಲಿ, ಬಾದಲ್ ತನ್ನ ಯುಕೆಜಿ ವಿದ್ಯಾರ್ಥಿನಿಯನ್ನು ಶಾಲೆಯಲ್ಲಿ ಫೇಲ್ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದರು. ಬಾದಲ್ ಪೋಸ್ಟ್ ಮಾಡಿದ ಸ್ಕ್ರೀನ್‌ಶಾಟ್‌ಗಳ ಪ್ರಕಾರ, ನಾಲ್ಕು ವಿಷಯಗಳಲ್ಲಿ, ಒಂದರಲ್ಲಿ ವಿದ್ಯಾರ್ಥಿಯು ನಲವತ್ತಕ್ಕೆ ಐದು ಅಂಕಗಳಿಸಿದ್ದರಿಂದ ಫೇಲ್ ಮಾಡಲಾಗಿದೆ ಎಂದು ಹೇಳಿದ್ದರು. ಈ ವಿಷಯ ವೈರಲ್ ಆಗಿ, ಮಾಜಿ ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ಸೇರಿದಂತೆ ಹಲವು ಪ್ರಮುಖರು ಶಾಲೆ ವಿರುದ್ಧ ವಾಗ್ದಾಳಿ ನಡೆಸಿದ್ದರು. ಈ ಮಧ್ಯೆ ಶಿಕ್ಷಣ ಇಲಾಖೆ ಅಧಿಕಾರಿಗಳು ಶಾಲೆ ವಿರುದ್ಧವೂ ಕ್ರಮ ಕೈಗೊಂಡಿದ್ದರು, ಇದರ ಬಗ್ಗೆ ಸ್ಪಷ್ಟೀಕರಣ ನೀಡಬೇಕು ಮತ್ತು ಫಲಿತಾಂಶ ರದ್ದುಗೊಳಿಸಬೇಕೆಂದು ನೋಟಿಸ್ ಜಾರಿ ಮಾಡಲಾಗಿತ್ತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಒಂದೇ ವೇದಿಕೆಯಲ್ಲಿ ಶ್ರೀ ನಾರಾಯಣ ಗುರುಗಳ ಉಪದೇಶದ ಬಗ್ಗೆ ಸಿದ್ದು, ಪಿಣರಾಯಿ ಗುಣಗಾನ

ಕುಡಿದ ಅಮಲಿನಲ್ಲಿ ಬೈಕರ್ ಮಿಡ್‌ನೈಟ್ ಡ್ರಾಮಾಗೆ ಪೊಲೀಸರು ಸುಸ್ತು

ಜೀವಂತವಾಗಿರುವಾಗಲೇ 12ಲಕ್ಷ ವೆಚ್ಚದಲ್ಲಿ ತನ್ನ ಸಮಾಧಿ ನಿರ್ಮಿಸಿದ ವಿಚಿತ್ರ ವ್ಯಕ್ತಿ

ಇಂಧೋರ್‌: ಕಲುಷಿತ ನೀರು ಸೇವಿಸಿ 7 ಜನ ಸಾವು, ಹಲವು ಮಂದಿ ಅಸ್ವಸ್ಥ

ಬಯೋಕಾನ್ ಉದ್ಯೋಗಿ ಅನಂತಕುಮಾರ್ ಸಾವು ಪ್ರಕರಣ, ಕಿರಣ್ ಮಜುಂಧಾರ್‌ ಶಾ ಪ್ರತಿಕ್ರಿಯೆ

ಮುಂದಿನ ಸುದ್ದಿ
Show comments