Publish Date: Thu, 17 Oct 2019 (10:19 IST)
Updated Date: Thu, 17 Oct 2019 (10:21 IST)
ಮೈಸೂರು : ಚಾಮುಂಡಿ ಬೆಟ್ಟದಲ್ಲಿ ಉಭಯ ನಾಯಕರಾದ ಸಾರಾ ಮಹೇಶ್ ಹಾಗೂ ಹೆಚ್.ವಿಶ್ವನಾಥ್ ಅವರ ಆಣೆ ಪ್ರಮಾಣದ ರಾಜಕೀಯ ಕೊನೆಗೂ ಠುಸ್ ಆಗಿದೆ.
ಹೆಚ್ ವಿಶ್ವನಾಥ್ ಅವರು 25 ಕೋಟಿಗೆ ತನ್ನನ್ನ ಮಾರಿಕೊಂಡಿದ್ದಾರೆ ಎಂದು ಸಾರಾ ಮಹೇಶ್ ಆರೋಪಕ್ಕೆ ಚಾಮುಂಡಿ ಸನ್ನಿಧಿಯಲ್ಲಿ ಇಂದು ಆಣೆ ಪ್ರಮಾಣ ಮಾಡಲು ಇಬ್ಬರು ನಾಯಕರು ಮುಂದಾಗಿದ್ದರು. ಅದರಂತೆ ಚಾಮುಂಡಿ ಬೆಟ್ಟಕ್ಕೆ ಇಬ್ಬರು ನಾಯಕರು ಭೇಟಿ ಕೂಡ ನೀಡಿದ್ದರು.
ಆದರೆ ಹೆಚ್.ವಿಶ್ವನಾಥ್ ಅವರು ನಾನು ಆಣೆ ಪ್ರಮಾಣ ಮಾಡಲು ಬಂದಿಲ್ಲ. ನನ್ನನ್ನ ಖರೀದಿ ಮಾಡಿದವನನ್ನು ಸ್ವಾಗತಿಸಲು ಬಂದಿದ್ದೇನೆ. ಸಾರಾ ಮಹೇಶ್ ಅವನನ್ನು ಕರೆದುಕೊಂಡು ಬರಬೇಕು ಎಂದು ಹೇಳಿ ಯಾವುದೇ ಆಣೆ ಪ್ರಮಾಣ ಮಾಡದೆ ಅಲ್ಲಿಂದ ತೆರಳಿದ್ದಾರೆ.
ಹಾಗೇ ಸಾರಾ ಮಹೇಶ್ ಅವರು, ನಾನು ಅವರನ್ನು ಕರೆದುಕೊಂಡು ಬರುತ್ತೀನಿ ಎಂದು ಎಲ್ಲೂ ಹೇಳಿಲ್ಲ ಎಂದು ಹೇಳಿ ವಿಶ್ವನಾಥ್ ಹೊರಟ ವಿಚಾರ ಕೇಳಿ ಅವರು ಅಲ್ಲಿಂದ ತೆರಳಿದ್ದಾರೆ. ಕೊನೆಗೂ ಜನರು ಕುತೂಹಲದಿಂದ ಕಾಯುತ್ತಿದ್ದ ಆಣೆ ಪ್ರಮಾಣ ರಾಜಕೀಯ ಅಲ್ಲಿಗೆ ಠುಸ್ ಆಗಿದೆ.