Select Your Language

Notifications

webdunia
webdunia
webdunia
webdunia

ಸಿಎಂ ಸಿದ್ಧರಾಮಯ್ಯಗೆ ಸಿನಿಮಾಗಳ ಆಫರ್ ಮೇಲೆ ಆಫರ್!

ಸಿಎಂ ಸಿದ್ಧರಾಮಯ್ಯಗೆ ಸಿನಿಮಾಗಳ ಆಫರ್ ಮೇಲೆ ಆಫರ್!
Bangalore , ಸೋಮವಾರ, 8 ಮೇ 2017 (11:44 IST)
ಬೆಂಗಳೂರು: ಸಿಎಂ ಸಿದ್ಧರಾಮಯ್ಯಗೆ ಇತ್ತೀಚೆಗೆ ಹಲವು ಸಿನಿಮಾಗಳ ಆಫರ್ ಬರುತ್ತಿವೆ. ಅರೇ ಸಿಎಂ ಸಿದ್ಧರಾಮಯ್ಯ ಬಣ್ಣ ಹಚ್ಚುವುದುಂಟೇ? ಎಂದು ಅಚ್ಚರಿಯಾಗಬೇಡಿ. ರಾಜಕಾರಣಕ್ಕಂತೂ ಸಿಎಂ ಸಾಹೇಬರು ಗುಡ್ ಬೈ ಹೇಳಲ್ಲ.

 
ಅಲ್ಲದೆ ಬಣ್ಣನೂ ಹಚ್ಚಲ್ಲ. ಸಿನಿಮಾ ನಿರ್ಮಿಸುವ ಮಾತೇ ಇಲ್ಲ. ಅಷ್ಟಕ್ಕೂ ಸಿಎಂ ಸಿದ್ಧುಗೆ ಆಫರ್ ಬರುತ್ತಿರುವುದು ಸಿನಿಮಾ ವೀಕ್ಷಣೆ ಮಾಡಲು. ಮೊನ್ನೆಯಷ್ಟೇ ರಾಜಕುಮಾರ ಸಿನಿಮಾ ನೋಡಿದ ಮೇಲೆ ಒಬ್ಬೊಬ್ಬರೇ ನಮ್ಮ ಸಿನಿಮಾ ನೋಡಿ ಎಂದು ಆಫರ್ ಕೊಡುತ್ತಲೇ ಇದ್ದಾರೆ.

ರಾಜಕುಮಾರ ಸಿನಿಮಾದ ನಂತರ ಬಾಹುಬಲಿ 2 ಸಿನಿಮಾ ವೀಕ್ಷಿಸಿ ಸಿಎಂಗೆ ರಾಗ ಸಿನಿಮಾ ವೀಕ್ಷಿಸುವಂತೆ ರಾಗ ತಂಡ ಕೇಳಿಕೊಂಡಿತ್ತು. ಅದನ್ನು ಸಿಎಂ ಸಾಹೇಬರು ಇನ್ನೂ ನೆರವೇರಿಸಿಲ್ಲ.

ಇದೀಗ ಬಿ.ಸಿ. ಪಾಟೀಲರು ತಮ್ಮ ಹ್ಯಾಪಿ ನ್ಯೂ ಇಯರ್ ಚಿತ್ರ ವೀಕ್ಷಿಸುವಂತೆ ಮನವಿ ಮಾಡಿದ್ದಾರೆ. ಮೊನ್ನೆ ಬಿಡುಗಡೆಯಾದ ಹ್ಯಾಪಿ ನ್ಯೂ ಇಯರ್ ಚಿತ್ರ ಕನ್ನಡ ಚಿತ್ರರಂಗದಲ್ಲಿ ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ಸಿಎಂ ಮುಂದಿನ ವಾರ ನೋಡೋಣ ಎಂದು ಭರವಸೆ ನೀಡಿದ್ದಾರಂತೆ. ಹಾಗಾಗಿ ಸಿಎಂ ಸಾಹೇಬರಿಗೆ ವಾರಕ್ಕೊಂದು ಸಿನಿಮಾ ನೋಡುವ ಭಾಗ್ಯ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಕರಾವಳಿಯಲ್ಲಿ ಬಲಗೊಳ್ಳುತ್ತಿದೆ ಐಸಿಸ್ ಉಗ್ರ ಸಂಘಟನೆ!