Webdunia - Bharat's app for daily news and videos

Install App

ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿ ಈ ವರ್ಷ ಆರಂಭ: ಸಿಎಂ ಬೊಮ್ಮಾಯಿ ಘೋಷಣೆ

Webdunia
ಸೋಮವಾರ, 25 ಏಪ್ರಿಲ್ 2022 (16:00 IST)
ಮೈಸೂರಿನಲ್ಲಿ ಚಿತ್ರ ನಗರಿ ಕಾಮಗಾರಿಗಳನ್ನು ಇದೇ ವರ್ಷ ಪ್ರಾರಂಭಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಕಟಿಸಿದ್ದಾರೆ.
ನಟಸಾರ್ವಭೌಮ ಡಾ ರಾಜಕುಮಾರ್ ಅವರ 94 ನೇ ಜನ್ಮದಿನಾಚರಣೆ ಹಾಗೂ 2017 ನೇ ದಿನದರ್ಶೀ ವರ್ಷದ ರಾಜ್ಯ ಚಲನಚಿತ್ರ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಈ ಘೋಷಣೆ ಮಾಡಿದರು.
ಯಾರೂ ಮನವಿ ಅಥವಾ ಬೇಡಿಕೆ ಸಲ್ಲಿಸದಿದ್ದರೂ ಪ್ರಸಕ್ತ 2022-23 ನೇ ಸಾಲಿನ ರಾಜ್ಯ  ಆಯವ್ಯಯದಲ್ಲಿ ತಾವು 125 ಕನ್ನಡ ಮತ್ತು ಪ್ರಾದೇಶಿಕ ಚಲನಚಿತ್ರಗಳಿಗೆ ಬದಲಾಗಿ 200 ಚಲನಚಿತ್ರಗಳಿಗೆ ಸಹಾಯಧನ ನೀಡಲು ಅವಕಾಶ ಕಲ್ಪಿಸಿರುವುದಾಗಿ ತಿಳಿಸಿದರು.
ಕಾಡುಗಳ್ಳ ವೀರಪ್ಪನ್ ಅವರಿಂದ ಬಂಧಮುಕ್ತರಾದ ನಂತರ ಡಾ ರಾಜ್ ಕುಮಾರ್ ಅವರೊಂದಿಗೆ ಮಾತುಕತೆ ನಡೆಸಿದ ಸಂದರ್ಭದಲ್ಲಿ ಯಾವುದೇ ಕಹಿ ಘಟನೆಗಳನ್ನು ಸ್ಮರಿಸದೆಯೇ ಕೆಟ್ಟ ವಿಚಾರಗಳನ್ನು ಪ್ರಸ್ತಾಪಿಸದ ಡಾ ರಾಜ್ ಕುಮಾರ್ ಅವರ ಉದಾತ್ತ ಮನೋಭಾವವನ್ನು ಕೊಂಡಾಡಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಜೀವಿತಾವಧಿ ಸಾಧನೆಗಾಗಿ ಸುಪ್ರಸಿದ್ಧ ನಟಿ ಲಕ್ಷ್ಮೀ ಅವರಿಗೆ ಡಾ ರಾಜಕುಮಾರ್ ಪ್ರಶಸ್ತಿ ಹಾಗೂ ಹೆಸರಾಂತ ನಿರ್ದೇಶಕ ಎಸ್ ನಾರಾಯಣ್ ಅವರಿಗೆ ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ನೀಡಿ  ಗೌರವಿಸಿದರು.
ಇದೇ ಸಂದರ್ಭದಲ್ಲಿ ಡಾ ರಾಜ್ ಕುಮಾರ್ ಅವರ ಹೆಸರಿನ ಪ್ರಶಸ್ತಿ ತಮಗೆ ಲಭಿಸುತ್ತಿರುವುದು ರಾಜ್ ಅವರ ಆಶೀರ್ವಾದ ಲಭಿಸಿದಂತೆ ಎಂದು ನಟಿ ಲಕ್ಷ್ಮೀ ಅವರು ಭಾವುಕರಾಗಿ ನುಡಿದರು.
ಕೆಲಸ ಕಲಿಯಲು ಪುಟ್ಟಣ್ಣ ಕಣಗಾಲ್ ಅವರಲ್ಲಿ ತಾವು ಅವಕಾಶ ಕೋರಿದ ದಿನಗಳನ್ನು ಸ್ಮರಿಸಿದ ನಟ-ನಿರ್ದೇಶಕ ಎಸ್ ನಾರಾಯಣ್ ಅವರು ಪುಟ್ಟಣ್ಣ ಅವರ ಹೆಸರಿನ ಪ್ರಶಸ್ತಿ ತಮಗೆ ದೊರೆತಿರುವುದು ತಮ್ಮ ಸೌಭಾಗ್ಯ ಹಾಗೂ ಈ ದಿನ ತಮ್ಮ ಪಾಲಿನ ಸುದಿನ ಎಂದು ಬಣ್ಣಿಸಿದರು.
ಕನ್ನಡ ಚಲನಚಿತ್ರ ರಂಗಕ್ಕೆ ಹಲವು ಸದಭಿರುಚಿಯ ಚಿತ್ರಗಳ ಕೊಡುಗೆ ನೀಡಿದ ನಿರ್ಮಾಪಕ ಹಾಗೂ ವಿಷ್ಣುವರ್ಧನ್ ಪ್ರಶಸ್ತಿಗೆ ಭಾಜನರಾಗಿದ್ದ ಜಿ ಎನ್ ಲಕ್ಷ್ಮೀಪತಿ ಅವರು ನಿಧನರಾಗಿರುವ ಹಿನ್ನೆಲೆಯಲ್ಲಿ ಲಕ್ಷ್ಮೀಪತಿ ಅವರ ಪುತ್ರ ರಾಮಪ್ರಸಾದ್ ಅವರು ತಮ್ಮ ತಂದೆಯ ಪರವಾಗಿ ಮುಖ್ಯಮಂತ್ರಿಯವರಿಂದ ವಿಷ್ಣುವರ್ಧನ್ ಪ್ರಶಸ್ತಿ ಸ್ವೀಕರಿಸಿದರು.
ಡಾ ರಾಜಕುಮಾರ್ ಪ್ರಶಸ್ತಿ, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ ಹಾಗೂ ವಿಷ್ಣುವರ್ಧನ್ ಪ್ರಶಸ್ತಿ ವಿಜೇತರಿಗೆ ತಲಾ ಐದು ಲಕ್ಷ ರೂಪಾಯಿ ನಗದು, ಐವತ್ತು ಗ್ರಾಂ ಚಿನ್ನದ ಪದಕ, ಪ್ರಶಸ್ತಿ ಫಲಕ, ಸ್ಮರಣಿಕೆ ಮತ್ತು ಫಲ ತಾಂಬೂಲ ನೀಡಿ ಮುಖ್ಯಮಂತ್ರಿ ಗೌರವಿಸಿದ್ದು ಗಮನಾರ್ಹ.
ಉತ್ತಮ ನಟ, ಉತ್ತಮ ನಟಿ ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಗಳ ಹಾಗೂ ಇತರೆ ತಾಂತ್ರಿಕ ವರ್ಗದವರಿಗೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments