Publish Date: Mon, 24 Jan 2022 (13:43 IST)
Updated Date: Mon, 24 Jan 2022 (14:45 IST)
ತುಮಕೂರು : ಸಂಪುಟ ಪುನಾರಚನೆ ಮಾಡುವ ವಿಚಾರ ಗೊತ್ತಿಲ್ಲ. ಆದರೆ ಖಾಲಿ ಇದ್ದ ಸ್ಥಾನಗಳನ್ನು ಭರ್ತಿ ಮಾಡುತ್ತಾರೆ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚುನಾವಣೆಗೆ ಒಂದು ವರ್ಷ ಬಾಕಿ ಇರುವಾಗ ಸಚಿವ ಸ್ಥಾನ ಖಾಲಿ ಬಿಡಬಾರದು. ಹಾಗಾಗಿ ಭರ್ತಿ ಮಾಡಬಹುದು ಎಂದ ಅವರು, ಇದೇ ತಿಂಗಳ 27ಕ್ಕೆ ಕ್ಯಾಬಿನೆಟ್ ಸಭೆ ಇದೆ. ಅದಾದ ಬಳಿಕ ಕೆಲ ನಿರ್ಧಾರ ಆಗಬಹುದು. ಜೊತೆಗೆ ಉಸ್ತುವಾರಿ ಸಚಿವರ ನೇಮಕ ಕೂಡ ಇದೇ ಸಭೆಯಲ್ಲಿ ನಿರ್ಧಾರ ಆಗಬಹುದು.
ಆದರೆ ನಿಗಮ ಮಂಡಳಿಯ ಪುನಾರಚನೆ ಇಲ್ಲ. ಬದಲಾಗಿ ಖಾಲಿ ಇರುವ 18-20 ಸ್ಥಾನಗಳು ಭರ್ತಿಯಾಗಬಹುದು ಎಂದು ತಿಳಿಸಿದರು. ಸಿಎಂ ಬೊಮ್ಮಾಯಿ ಮುಂದುವರಿಯುತ್ತಾರೆ ಎಂಬ ವಾತಾವರಣವಿದೆ.