Select Your Language

Notifications

webdunia
webdunia
webdunia
webdunia

ಹಣಕ್ಕಾಗಿ ಅರ್ಚಕರ ನಡುವೆ ಹೊಡೆದಾಟ

ಹಣಕ್ಕಾಗಿ ಅರ್ಚಕರ ನಡುವೆ ಹೊಡೆದಾಟ
bangalore , ಮಂಗಳವಾರ, 17 ಜನವರಿ 2023 (18:17 IST)
ತಟ್ಟೆ ಕಾಸಿಗಾಗಿ ಪೂಜಾರಿಗಳು ಹೊಡೆದಾಡಿಕೊಂಡಿರುವ ಘಟನೆ ಕೊಳ್ಳೇಗಾಲ ತಾಲೂಕಿನ ಚಿಕ್ಕಲ್ಲೂರಿನ ಶ್ರೀ ಸಿದ್ದಪ್ಪಾಜಿ ದೇವಾಲಯದಲ್ಲಿ ನಡೆದಿದೆ.‌ ಯಂತ್ರ ಹಾಗೂ ಭಕ್ತರಿಂದ ತಟ್ಟೆಗೆ ಬೀಳುವ ಹಣದ ವಿಚಾರಕ್ಕೆ ಅರ್ಚಕ‌ ಕುಟುಂಬಕ್ಕೆ ಸೇರಿದ ಅಣ್ಣ- ತಮ್ಮಂದಿರು ಪರಸ್ಪರ ಹೊಡೆದಾಡಿಕೊಂಡಿರುವುದು ಸಿಸಿಟಿವಿಯಲ್ಲಿ ಸೆರೆಯಾಗಿ ದೃಶ್ಯ ವೈರಲ್‌ ಆಗಿದೆ. ಘಟನೆ ಎರಡು ಮೂರು ದಿನದ ಹಿಂದೆ ನಡೆದಿದ್ದು, ವೀಡಿಯೋ ವೈರಲ್ಲಾದ ಬಳಿಕ ಹೊಡೆದಾಟ ಬೆಳಕಿಗೆ ಬಂದಿದೆ. ಭಾನುವಾರ ಸಂಜೆ ಸುಮಾರು 6 ಗಂಟೆ ಸಮಯದಲ್ಲಿ ಶ್ರೀ ಸಿದ್ದಪ್ಪಾಜಿ ದೇವಾಲಯದ ಅರ್ಚಕ ಕುಟುಂಬದವರಿಗೆ ಹಣದ ವಿಚಾರವಾಗಿ ಗಲಾಟೆ ನಡೆದಿದೆ. ರಾಜ್ಯದಲ್ಲಿಯೇ ಶ್ರೀ ಕ್ಷೇತ್ರ ಸಿದ್ದಪ್ಪಾಜಿ ಜಾತ್ರೆ ಹೆಸರುವಾಸಿಯಾಗಿದ್ದು, ಜನವರಿ 6 ರಿಂದ 10 ರವರೆಗೆ ಅದ್ಧೂರಿಯಾಗಿ ಜಾತ್ರೆ ನಡೆದಿತ್ತು. ಜಾತ್ರೆ ಮುಗಿದರೂ ಭಕ್ತರು ರಾಜ್ಯದ ನಾನಾ ಭಾಗಗಳಿಂದ ಚಿಕ್ಕಲ್ಲೂರಿಗೆ ಇನ್ನೂ ಭೇಟಿ ನೀಡುತ್ತಲೇ ಇದ್ದಾರೆ. ಜಾತ್ರೆಗೆ ಬಾರದ ಜನರು ಇದೀಗ ಹರಕೆ ತೀರಿಸುತ್ತಿದ್ದಾರೆ. ಈ ವೇಳೆ ಭಕ್ತರು ಹಾಕಿದ ತಟ್ಟೆ ಕಾಸಿಗೆ ಪೂಜಾರಿಗಳು ಹೊಡೆದಾಡಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವ ಸುನೀಲ್​​ ಕುಮಾರ್​ ವಿರುದ್ಧ ಭಕ್ತನ ಕಿಡಿ