ಸ್ವಂತ ತಂದೆಯೇ ಮಗಳ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸಿದ ಹೇಯ ಘಟನೆ ಬೆಂಗಳೂರಿನಲ್ಲಿ ನಡೆದಿದೆ.
ಆರೋಪಿಯನ್ನು ಯಲಹಂಕದ ಕಾವೇರಿ ಲೇಔಟ್‍ನ ನಿವಾಸಿ ಶಿವರಾಜ್(50) ಎಂದು ಗುರುತಿಸಲಾಗಿದ್ದು ಆತ ಇತ್ತೀಚಿಗೆ ತನ್ನ ಮಗಳ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಆತನ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಮಗಳು ಈ ಕುರಿತು ತನ್ನ ತಾಯಿಗೆ ವಿಷಯ ತಿಳಿಸಿದ್ದಾಳೆ.
ಆದರೆ ಆಕೆಯ ನೋವಿಗೆ ಸ್ಪಂದಿಸದ ತಾಯಿ ಅಕ್ಕಪಕ್ಕದವರಿಗೆ ಗೊತ್ತಾದರೆ ಮರ್ಯಾದೆ ಹಾಳಾಗತ್ತೆ ಎಂದು ಮಗಳ ಬಾಯಿ ಮುಚ್ಚಿಸಿದ್ದಾರೆ. ಅತ್ತ ತಂದೆ ಕೀಚಕನಾದರೆ ಇತ್ತ ತಾಯಿಯಿಂದಲೂ ರಕ್ಷಣೆ ಸಿಗುವುದಿಲ್ಲವೆಂಬುದು ಖಚಿತವಾದ ಕೂಡಲೇ ಪೀಡಿತ ಯುವತಿ ತನ್ನ ತಮ್ಮನೊಂದಿಗೆ ಮಧ್ಯರಾತ್ರಿ ಮನೆ ಬಿಟ್ಟು ಬಂದಿದ್ದಾಳೆ.
ಪೊಲೀಸರ ರಕ್ಷಣೆ ಕೋರಿ ಬಂದರೂ ಅಲ್ಲೂ ಅವಳಿಗೆ ಕಾದಿದ್ದು ನಿರಾಸೆ. ಯಲಹಂಕ ನ್ಯೂ ಟೌನ್ ಪೊಲೀಸರಿಗೆ ದೂರು ನೀಡಿದಾಗ ಅವರು ಸರಿ ವಿಚಾರಣೆ ನಡೆಸುತ್ತೇವೆ ಎಂದು ನಿರ್ಲಕ್ಷಿಸಿದ್ದಾರೆ.
ಅದೃಷ್ಟವಶಾತ್ ಮಾನವ ಹಕ್ಕುಗಳ ಆಯೋಗ ಯುವತಿ ಸಹಾಯಕ್ಕೆ ನಿಂತಿದ್ದು ಯಲಹಂಕ ಪೊಲೀಸರಿಗೆ ನೋಟಿಸ್ ನೀಡಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.