Webdunia - Bharat's app for daily news and videos

Install App

ಸಂಘದ ನೂತನ ಸದಸ್ಯತ್ವಕ್ಕೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ

Webdunia
ಶನಿವಾರ, 8 ಜೂನ್ 2019 (17:46 IST)
ಬಳ್ಳಾರಿ ನಗರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ವೀರಶೈವ ವಿದ್ಯಾವರ್ಧಕ ಸಂಘದಲ್ಲಿ ನೂತನ ಸದಸ್ಯತ್ವ ನೀಡಬೇಕೆಂದು ಆಗ್ರಹಿಸಿ ಉಪವಾಸ ಸತ್ಯಾಗ್ರಹ ಮುಂದುವರಿದಿದೆ.

ಸಂಘದ ಕಚೇರಿ ಮುಂದೆ  ನೂತನ ಸದಸ್ಯತ್ವ ಹೋರಾಟ ಸಮಿತಿಯ ಕಾರ್ಯಕರ್ತರು, ಮುಖಂಡರು ನಡೆಸಿರುವ  ಉಪವಾಸ ಸತ್ಯಾಗ್ರಹ ಮೂರನೇ ದಿನಕ್ಕೆ ಕಾಲಿಟ್ಟಿದೆ.

ಹೋರಾಟ ಸಮಿತಿಯ ಸಂಚಾಲಕ ಮೀನಳ್ಳಿ ಚಂದ್ರಶೇಖರ್, ಸಂಘದ ಆಜೀವ ಸದಸ್ಯ ಮಹಾಲಿಂಗಯ್ಯ(ರಾಜಣ್ಣ)ಅಂಗಡಿ ಶಂಕರ್, ಹೊನ್ನನಗೌಡ,  ಬಿ.ಡಿ.ಗೌಡ ಮೊದಲಾದವರು ಉಪವಾಸ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದಾರೆ.

ಕಳೆದ ಹತ್ತು ವರ್ಷಗಳಿಂದ ನೂತನ ಸದಸ್ಯತ್ವ ನೀಡಿ ಎಂದು ಹೋರಾಟ ಮಾಡುತ್ತಾ ಬಂದರೂ ಆಡಳಿತಕ್ಕೆ ಬರುವ  ಸಂಘದ ಪದಾಧಿಕಾರಿಗಳು ಇಂದು ನಾಳೆ ಎನ್ನುತ್ತಲೇ ಬಂದಿದ್ದಾರೆ. ಈ ಕುರಿತು ಗಮನ ಹರಿಸುತ್ತಿಲ್ಲ.

ಬೈಲಾ ಪ್ರಕಾರ ಒಬ್ಬರು  ಸದಸ್ಯತ್ವ ಪಡೆಯಲು  5 ಸಾವಿರ ನೀಡಬೇಕಿದ್ದು ಅದರಂತೆ ಹೋರಾಟ ಸಮಿತಿ 334 ಜನರಿಂದ ಹಣ ಸಂಗ್ರಹಿಸಿ ಅದರ ಮೊತ್ತದ ಡಿಡಿಯನ್ನು ಸಂಘಕ್ಕೆ ನೀಡಿದೆ.

ನಾಳೆ ನಡೆಯುವ ವೀ.ವಿ.ಸಂಘದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ನೂತನ ಸದಸ್ಯತ್ವ ನೀಡುವ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ಸಮಿತಿಯು ಹಗಲು ರಾತ್ರಿ ನಿರಂತರವಾಗಿ ಉಪವಾಸ ಸತ್ಯಾಗ್ರಹ ಕೈಗೊಳ್ಳಲಿದ್ದು. ಆಗ ಸಂಭವಿಸುವ ಅನಾಹುತಗಳಿಗೆ ಸಂಘವೇ ಜವಾಬ್ದಾರಿಯಾಗಬೇಕಾಗುತ್ತದೆ ಎಂದರು.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments