ರಾಜ್ಯ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘಟನೆಗಳಿಂದ ನಗರದ ಫ್ರೀಡಂಪಾರ್ಕ್ ನಲ್ಲಿ ಧರಣಿ ನಡೆಯುತ್ತಿದೆ.ಕಬ್ಬಿನ ಎಫ್.ಆರ್.ಪಿ ದರ ಏರಿಕೆಗಾಗಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿದ್ದು, ರೈತ ಸಂಘಟನೆಗಳು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕ ವಿದ್ಯುತ್ ನೀಡಬೇಕು.ಕಬ್ಬು ದರ ನಿಗದಿಯಾಗಲಿ,ಸಕ್ಕರೆ ಕಾರ್ಖಾನೆ ಸುಲಿಗೆ ತಪ್ಪಲಿ,ರೈತರ ಹೋರಾಟದ ಮೊಕದ್ದಮೆಗಳನ್ನು ವಾಪಾಸ್ ಪಡೆಯಬೇಕು,ರೈತರಿಗೆ ಬೀಜ,ಗೊಬ್ಬರ ಖರೀದಿಸಲು ತುರ್ತು ಸಾಲ ನೀಡಬೇಕು ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿರುದ್ದ ರೈತರು ರೊಚ್ಚಿಗೆದ್ದಿದ್ದಾರೆ.ಸರ್ಕಾರಕ್ಕೆ ಛೀ,....ಛೀ .,..ಥೂ....ಥೂ....ರೈತರು ಛೀಮಾರಿ ಹಾಕಿದಾರೆ.