Publish Date: Thu, 22 Nov 2018 (20:35 IST)
Updated Date: Thu, 22 Nov 2018 (20:37 IST)
ಕಬ್ಬು ಬೆಳೆಗಾರರ ಹೋರಾಟ ತೀವ್ರ ಸ್ವರೂಪ ಪಡೆದುಕೊಂಡ ಬೆನ್ನಲ್ಲೇ ಬೆಳಗಾವಿಯ ಸುವರ್ಣ ಸೌಧದಲ್ಲಿ ಕಬ್ಬು ತುಂಬಿದ ವಾಹನ ಚಲಾಯಿಸಲು ಯತ್ನಿಸಿದ್ದ ರೈತ ಮುಖಂಡ ಹೇಳಿಕೆ ನೀಡಿದ್ದಾರೆ.
ಕಬ್ಬು ಬೆಳೆಗಾರರು ಹಾಗೂ ರೈತರ ಹೋರಾಟಕ್ಕೆ ಸಿಎಂ ಸ್ಪಂದಿಸಲಿಲ್ಲ. ಆಗ ನಾವೇ ಹೋರಾಟವನ್ನ ರೂಪಿಸಿದೆವು.
224 ಶಾಸಕರು ರೈತರ ಪರ ಧ್ವನಿ ಎತ್ತುತ್ತಿಲ್ಲಾ ಎಂದು ಕಬ್ಬಿನ ಗಾಡಿ ನುಗ್ಗಿಸಿದ್ದೇವೆ.
ನಾವು ರೈತ ಹೋರಾಟದಿಂದ ಜನರಿಗೆ ಸಮಸ್ಯೆ ಮಾಡಬಾರದು ಎಂದು ತೀರ್ಮಾನಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ.
ರೈತರ ನ್ಯಾಯಕ್ಕಾಗಿ ಕಬ್ಬಿನ ಗಾಡಿ ಸುವರ್ಣ ಸೌಧಕ್ಕೆ ನುಗ್ಗಿಸಿದ್ದೇವೆ ಎಂದ ಯಮಕನಮರಡಿ ಹೇಳಿಕೆ ನೀಡಿದ್ದಾರೆ.