Select Your Language

Notifications

webdunia
webdunia
webdunia
webdunia

ಹಾಲು ಉತ್ಪಾದಕರಿಗೆ ಒಂದು ಲೀಟರ್ ಗೆ ಕನಿಷ್ಠ 50 ರೂಪಾಯಿ ಹೆಚ್ಚಳ ಮಾಡುವಂತೆ ಆಗ್ರಹಿಸಿ ರೈತರ ಧರಣಿ

Farmers' demand
bangalore , ಬುಧವಾರ, 15 ಜೂನ್ 2022 (19:09 IST)
ಮಾಜಿ
ಹಾಲು ಉತ್ಪಾದಕರಿಗೆ ಒಂದು ಲೀಟರ್ ಗೆ ಕನಿಷ್ಠ 50 ರೂಪಾಯಿ ಮಾಡಿ ಅಂತಾ ಇಂದು ಫ್ರೀಡಂ ಪಾರ್ಕ್ ನಲ್ಲಿ ರೈತರು ಪ್ರತಿಭಟನೆ ನಡೆಸಿದ್ರು. ಹಾಲು ಉತ್ಪಾದಕರ ಒಕ್ಕೂಟಕ್ಕೆ ಹಾಗೂ ಸರ್ಕಾರಕ್ಕೆ ಲಾಭವಿದೆ. ಆದ್ರೂ ಕೂಡ ಇಡೀ ಮಾಡ್ತಿಲ್ಲ ಅಂತಾ ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ರು. ಇದೇ ವೇಳೆ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ನಮಗೆ ಸರ್ಕಾರದ ಮೇಲೆ ನಂಬಿಕೆ ಇಲ್ಲ ಎಂದು ಪ್ರತಿಭಟನಾಕಾರರು, ಹಾಲನ್ನ ರಸ್ತೆಗೆ ಚೆಲ್ಲಿ ಪ್ರತಿಭಟನೆ ನಡೆಸೋದಾಗಿ ಪಟ್ಟು ಹಿಡಿದರು. ಕೂಡಲೇ ಸರ್ಕಾರ ನಮ್ಮ ಸಮಸ್ಯೆಗೆ ಸ್ಪಂದಿಸಬೇಕು. ಒಂದು ಲೀಟರ್ ಹಾಲಿಗೆ ಕನಿಷ್ಠ 50 ರೂಪಾಯಿ ಹಣ ಕೊಡಬೇಕು ಅಂತಾ ಪ್ರತಿಭಟನಾಕಾರರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಲೋಕಾಯುಕ್ತರಾಗಿ ನ್ಯಾ.ಬಿ.ಎಸ್.ಪಾಟೀಲ್‌ ಪ್ರಮಾಣ ವಚನ ಸ್ವೀಕಾರ