Select Your Language

Notifications

webdunia
webdunia
webdunia
webdunia

ಎಸ್‌ಸಿ/ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವರಿಗೆ ಶಾಕ್!

ಎಸ್‌ಸಿ/ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ನೀಡುವರಿಗೆ ಶಾಕ್!
bengaluru , ಗುರುವಾರ, 2 ಸೆಪ್ಟಂಬರ್ 2021 (20:22 IST)
ಬೆಂಗಳೂರು: ಪರಿಶಿಷ್ಟ ಜಾತಿ/ಪಂಗಡದ ಸುಳ್ಳು ಜಾತಿ ಪ್ರ
ಮಾಣ ಪತ್ರ ಪಡೆಯುವ ವ್ಯಕ್ತಿ ಅಲ್ಲದೆ, ಕೊಡುವ ಅಧಿಕಾರಿಗಳ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸರ್ಕಾರ ಆದೇಶಿಸಿದೆ.
ಸರ್ಕಾರದ ಅವಲತ್ತು ಪಡೆಯುವ ಸಲುವಾಗಿ ನಕಲಿ ದಾಖಲೆ ಸಲ್ಲಿಸಿ ಎಸ್‌ಸಿ/ಎಸ್‌ಟಿ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆಯುತ್ತಿರುವ ಪ್ರಕರಣಗಳು ಹೆಚ್ಚಾಗಿದೆ. ಇದನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ.
ಈ ಮೊದಲು ಸುಳ್ಳು ಜಾರಿ ಪ್ರಮಾಣ ಪತ್ರ ಎಂದು ಸಾಬೀತಾದ ಮೇಲೆ ಅಂತಿಮ ಆದೇಶಕ್ಕಾಗಿ ಜಿಲ್ಲಾ ಜಾತಿ ಪರಿಶೀಲನಾ ಸಮಿತಿಗೆ ರವಾನಿಸಲಾಗುತ್ತಿತ್ತು.ಸಮಿತಿ ಅಸಿಂಧುಗೊಳಿಸಿದ ನಂತರ ಮತ್ತು ತಹಸೀಲ್ದಾರ್ ಜಾತಿ ಪ್ರಮಾಣ ಪತ್ರವನ್ನು ರದ್ದುಪಡಿಸಿ ತಪ್ಪಿತಸ್ತರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಸೂಚಿಸುತ್ತಿದ್ದರು. ಈ ವೇಳೆ ಕೇವಲ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿಯ ವಿರುದ್ಧ ಮಾತ್ರ ಕ್ರಿಮಿನಲ್ ಪ್ರಕರಣ ದಾಖಲಿಸಿ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತಿತ್ತು.
ಇನ್ನೂ ಮುಂದೆ ಸುಳ್ಳು ಜಾತಿ ಪ್ರಮಾಣ ಪತ್ರ ಪಡೆದ ವ್ಯಕ್ತಿ, ವಿತರಿಸಿದ ಹಿಂದಿನ ತಹಸೀಲ್ದಾರ್, ಪ್ರಮಾಣ ಪತ್ರ ವಿತರಿಸಲು ವರದಿ ಸಲ್ಲಿಸಿದ ಕಂದಾಯ ನಿರೀಕ್ಷಕ, ಗ್ರಾಮ ಲೆಕ್ಕಾಧಿಕಾರಿ ವಿರುದ್ಧವೂ ಕ್ರಿಮಿನಲ್ ಕೇಸ್ ದಾಖಲಿಸುವಂತೆ ಪೊಲೀಸರಿಗೆ ನಾಗರೀಕ ಹಕ್ಕು ಜಾರಿ ನಿರ್ದೇಶನಾಲಯ ಆದೇಶಿಸಿದೆ. ಈ ಮೂಲಕ ಜಾತಿ ಪ್ರಮಾಣ ಪತ್ರ ವಿತರಿಸಿ ಅಧಿಕಾರಿಗಳಿಗೂ ಕಂಟಕ ಬರಲಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಸೆ.6ರವರೆಗೆ ರಾಜ್ಯದಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ