Select Your Language

Notifications

webdunia
webdunia
webdunia
webdunia

ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟ: ಹಲವರಿಗೆ ಗಾಯ

Rameshwaram Cafe

Krishnaveni K

ಬೆಂಗಳೂರು , ಶುಕ್ರವಾರ, 1 ಮಾರ್ಚ್ 2024 (15:52 IST)
Photo Courtesy: Twitter
ಬೆಂಗಳೂರು: ಬೆಂಗಳೂರಿನ ಖ್ಯಾತ ರೆಸ್ಟೋರೆಂಟ್ ರಾಮೇಶ್ವರಂ ಕೆಫೆಯಲ್ಲಿ ನಿಗೂಢ ಸ್ಪೋಟವಾಗಿದ್ದು, ಹಲವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಆದರೆ ಸ್ಪೋಟದ ಕಾರಣ ತಿಳಿದುಬಂದಿಲ್ಲ.

ಬೆಂಗಳೂರಿನ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆಯಲ್ಲಿ ಮಧ‍್ಯಾಹ್ನ 1.30 ರ ಸುಮಾರಿಗೆ ನಿಗೂಢ ವಸ್ತುವೊಂದು ಸ್ಪೋಟವಾಗಿದೆ. ಮೊದಲು ಇದು ಅಡುಗೆ ಮನೆಯಲ್ಲಿ ಬಾಯ್ಲರ್ ಸ್ಪೋಟವಾಗಿರಬಹುದು ಎಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಸ್ಪೋಟ ನಡೆದ ಜಾಗದಲ್ಲಿ ಐಡಿ ಕಾರ್ಡ್ ಮತ್ತು ಬ್ಯಾಗ್ ಒಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಭಾರೀ ಸದ್ದಿನೊಂದಿಗೆ ಸ್ಪೋಟವಾದಾಗ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಘಟನೆಯಲ್ಲಿ ಹೋಟೆಲ್ ನ ಸಿಬ್ಬಂದಿ ಸೇರಿದಂತೆ ಐವರಿಗೆ ಗಾಯವಾಗಿದೆ ಎಂದು ತಿಳಿದುಬಂದಿದೆ. ಹೋಟೆಲ್ ನ ಸಿಸಿಟಿವಿ ಕ್ಯಾಮರಾಗಳನ್ನು ಪರಿಶೀಲಿಸಲಾಗುತ್ತಿದೆ. ಘಟನಾ ಸ್ಥಳಕ್ಕೆ ವಿಧಿ ವಿಜ್ಞಾನ ಪ್ರಯೋಗಾಲಯದ ತಜ್ಞರು ಬಂದು ಪರಿಶೀಲನೆ ನಡೆಸಿದ್ದಾರೆ.

ಪ್ರಾಥಮಿಕ ತನಿಖೆಯಿಂದ ಹೋಟೆಲ್ ನಲ್ಲಿ ಯಾವುದೇ ವಸ್ತು ಸ್ಪೋಟವಾಗಿಲ್ಲ ಎಂದು ತಿಳಿದುಬಂದಿದ್ದು, ಹೊರಗಿನಿಂದ ತಂದ ವಸ್ತುವೇ ಸ್ಪೋಟಿಸಿದ್ದು ಎಂದು ಪತ್ತೆಯಾಗಿದೆ. ಹೀಗಾಗಿ ಮುನ್ನೆಚ್ಚರಿಕಾ ಕ್ರಮವಾಗಿ ಬಾಂಬ್ ನಿಷ್ಕ್ರಿಯ ದಳ, ಶ್ವಾನ ದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಪಾಕಿಸ್ತಾನ ಜಿಂದಾಬಾದ್ ಘೋಷಣೆ ಎಫ್ಎಸ್ಎಲ್ ವರದಿ ಬಂದಿಲ್ಲ: ಗೃಹಸಚಿವ ಪರಮೇಶ್ವರ್