ಬೆಂಗಳೂರು: ರಾಜಧಾನಿಯ ನ್ಯೂ ತರಗಪೇಟೆಯಲ್ಲಿ ನೆಡೆದ ಸ್ಪೋಟ ಪ್ರಕರಣ ಹಿನ್ನೆಲೆಯಲ್ಲಿ ದಕ್ಷಿಣ ವಿಭಾಗದ ಎಲ್ಲಾ ಗೋದಾಮುಗಳ ಪರಿಶೀಲನೆಗೆ ಶನಿವಾರ ನೆಡೆಯಿತು.
ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ವಿಭಾಗದ ಠಾಣೆಗಳ ವ್ಯಾಪ್ತಿಯ ಗೋದಾಮುಗಳ ಪರಿಶೀಲನೆ ಮಾಡಿ, ಸ್ಪೋಟಕಗಳು ಇದ್ದರೆ ಕೂಡಲೆ ಕ್ರಮ ಕೈಗೊಳ್ಳಲು ಇನ್ಸ್ಪೆಕ್ಟರ್ ಗಳಿಗೆ ಖಡಕ್ ಸೂಚನೆ ರವಾನಿಸಿದ್ದರು.
ಡಿಸಿಪಿ ಹರೀಶ್ ಪಾಂಡೆ ಮಾಹಿತಿ:
ಈಗಾಗಲೆ ವಿಭಾಗದ ವಿವಿಪುರಂ ಠಾಣಾ ವ್ಯಾಪ್ತಿಯಲ್ಲಿ ಗೋದಾಮು ಮಾಲೀಕರ ಮೀಟಿಂಗ್ ಮಾಡಲಾಗಿದೆ.
ನ್ಯೂ ತರಗಪೇಟೆಯ ಗೋದಾಮಿನಲ್ಲಿ ಸ್ಪೋಟವಾಗಿರುವಲ್ಲಿ ತಿಳಿದಿರುವಂತೆ ಮೂವರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಪೊಲೀಸ್ ಇಲಾಖೆ ಮುಂದಾಗಿದೆ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಈಟಿವಿ ಭಾರತಕ್ಕೆ ದೂರವಾಣಿ ಮೂಲಕ ಮಾಹಿತಿ ನೀಡಿದ್ದಾರೆ.