Select Your Language

Notifications

webdunia
webdunia
webdunia
webdunia

ಮಾಜಿ ಸಚಿವ ಎಚ್.ವೈ ಮೇಟಿಗೆ ಕ್ಲೀನ್ ಚಿಟ್ ಸಾಧ್ಯತೆ

ex-minister h.y.meti may get clean chit
ಬೆಂಗಳೂರು , ಮಂಗಳವಾರ, 18 ಏಪ್ರಿಲ್ 2017 (13:20 IST)
ಮಾಜಿ ಸಚಿವ ಎಚ್‌.ವೈ ಮೇಟಿ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ದೂರುಗಳು ಬಂದಿಲ್ಲವಾದ್ದರಿಂದ ಅವರಿಗೆ ಕ್ಲೀನ್ ಚಿಟ್ ಸಿಗುವ ಸಾಧ್ಯತೆಗಳಿವೆ ಎಂದು ಮೂಲಗಳು ತಿಳಿಸಿವೆ.
 
ಇನ್ನೆರಡು ದಿನಗಳಲ್ಲಿ ಸಿಐಡಿ ವರದಿ ಸರಕಾರಕ್ಕೆ ತಲುಪಲಿದೆ. ಮೇಟಿ ರಾಸಲೀಲೆ ಪ್ರಕರಣದ ವಿರುದ್ಧ ದೂರುಗಳು ಬಂದಿಲ್ಲವಾದ್ದರಿಂದ ಅವರನ್ನು ಆರೋಪದಿಂದ ಮುಕ್ತಗೊಳಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.
 
ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಚ್.ವೈ.ಮೇಟಿ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  
 
ಡಿಸೆಂಬರ್ 12 ರಂದು ಅಬಕಾರಿ ಸಚಿವ ಎಚ್ ವೈ ಮೇಟಿ ಅವರ ವಿಡಿಯೋ ಪ್ರಸಾರ ಮಾಡಿದ ಚಾನೆಲ್ ಗಳಿಗೆ ವಿಡಿಯೋ ನೀಡಿದ್ದು ಯಾರು? ಯಾರೆಲ್ಲ ಈ ವಿಡಿಯೋ ಬಹಿರಂಗವಾಗಲು ಸಹಕರಿಸಿದ್ದಾರೆ? ವಿಡಿಯೋ ಬಹಿರಂಗವಾಗದಂತೆ ಮೇಟಿ ಅವರು ಅಪಾರ ಪ್ರಮಾಣದ ಹಣ ಖರ್ಚು ಮಾಡಿ ಕೂಡಾ ವಿಫಲರಾಗಿದ್ದು ಏಕೆ? ಎನ್ನುವ ಪ್ರಶ್ನೆಗಳಿಗೆ ಸಿಐಡಿ ಉತ್ತರ ಕಂಡು ಕೊಂಡಿದೆ ಎನ್ನಲಾಗುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಜೆಡಿಎಸ್ ಏಕಾಂಗಿ ಸ್ಪರ್ಧೆ, ಯಾವುದೇ ಪಕ್ಷದ ಜೊತೆ ಹೊಂದಾಣಿಕೆ ಇಲ್ಲ: ದೇವೇಗೌಡ