Select Your Language

Notifications

webdunia
webdunia
webdunia
webdunia

ನನ್ನ ಮಾತನ್ನು ಅರ್ಥೈಸಿಕೊಳ್ಳದ ನೀವೆಂಥಾ ಸಾಹಿತಿ ಎಂದು ಪ್ರತಾಪ್ ಸಿಂಹರಿಗೆ ಟಾಂಗ್ ಕೊಟ್ಟ ವಿಶ್ವನಾಥ್

ನನ್ನ ಮಾತನ್ನು ಅರ್ಥೈಸಿಕೊಳ್ಳದ ನೀವೆಂಥಾ ಸಾಹಿತಿ ಎಂದು ಪ್ರತಾಪ್ ಸಿಂಹರಿಗೆ ಟಾಂಗ್ ಕೊಟ್ಟ ವಿಶ್ವನಾಥ್
Mysore , ಭಾನುವಾರ, 27 ನವೆಂಬರ್ 2016 (18:42 IST)
ಮೈಸೂರು: ಪ್ರಧಾನಿಯನ್ನು ಹೊಗಳುವ ನೆಪದಲ್ಲಿ ಬಿಜೆಪಿಯವರು ಪ್ರತಿಪಕ್ಷಗಳನ್ನು ಖಳನಾಯಕರನ್ನಾಗಿ ಮಾಡುತ್ತಿದೆ ಎಂದು ಮಾಜಿ ಸಚಿವ ವಿಶ್ವನಾಥ್ ಟೀಕಿಸಿದ್ದಾರೆ. ಅಲ್ಲದೆ ತಮ್ಮ ವಿರುದ್ಧ ಟೀಕೆ ಮಾಡಿದ ಮೈಸೂರು ಸಂಸದ ಪ್ರತಾಪ್ ಸಿಂಹ ಅವರನ್ನು ಹಿಗ್ಗಾ ಮುಗ್ಗಾ ಟೀಕಿಸಿದ್ದಾರೆ.

ನೋಟು ನಿಷೇಧ ವಿಚಾರದಲ್ಲಿ ಪ್ರಧಾನಿ ಮೋದಿ ಕೈಗೊಂಡ ನಿರ್ಧಾರವನ್ನು ಕಟುವಾಗಿ ಟೀಕಿಸಿದ್ದ ವಿಶ್ವನಾಥ್ ವಿರುದ್ಧ ಸಂಸದ ಪ್ರತಾಪ್ ಸಿಂಹ ವಾಗ್ದಾಳಿ ನಡೆಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ವಿಶ್ವನಾಥ್ ನಾನು ಪ್ರಧಾನಿಯವರನ್ನು ಅಸಂಬದ್ಧ ಶಬ್ಧಗಳಿಂದ ನಿಂದಿಸಿಲ್ಲ. ನನ್ನ ಮಾತನ್ನು ಅರ್ಥ ಮಾಡಿಕೊಳ್ಳದ ನೀವೆಂಥಾ ಸಾಹಿತಿ ಎಂದು ಪ್ರತಾಪ್ ಸಿಂಹ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ಕಾಳಧನವಿರುವ ಕಾರಣವೇ ವಿಶ್ವನಾಥ್ ಪ್ರಧಾನಿಯವನ್ನು ಟೀಕಿಸಿರಬೇಕು ಎಂದು ಪ್ರತಾಪ್ ಹೇಳಿದ ಹೇಳಿಕೆಗೆ ಉತ್ತರಿಸಿದ ಅವರು ನನ್ನ ಮಕ್ಕಳು ಸಾಮಾನ್ಯರಂತೆ ಜೀವನ ನಡೆಸುತ್ತಿದ್ದಾರೆ. ನಾನೂ ಐಷಾರಾಮಿ ಜೀವನ ಮಾಡುತ್ತಿಲ್ಲ. ನನ್ನ ಬಳಿ ಕಾಳಧನವಿದ್ದರೆ ತನಿಖೆ ನಡೆಸಲಿ ಎಂದು ವಿಶ್ವನಾಥ್ ಪ್ರತಾಪ್ ಸಿಂಹರಿಗೆ ಸವಾಲ್ ಹಾಕಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ನಾಳೆ ಭಾರತ ಬಂಧ್: ಬಿಎಂಟಿಸಿ, ಮೆಟ್ರೋ ಸಂಚಾರ ಯಥಾಸ್ಥಿತಿ