Publish Date: Sun, 09 Jul 2017 (16:54 IST)
Updated Date: Sun, 09 Jul 2017 (16:58 IST)
ವಿಚ್ಚೇದಿತ ಪತ್ನಿಗೆ ಮಾಜಿ ಪತಿಯೇ ನಿಂತು ಮದುವೆ ಮಾಡಿಸಿದ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ನನ್ನನ್ನ ಹೊಡೆದು ಬಡಿದು ಕೂಹಿ ಹಾಕಿ ತಾಳಿ ಕಟ್ಟಿಸಲಾಗಿದೆ ಎಂದು 2ನೇ ಪತಿ ಮಂಜುನಾಥ ಚಿಂತಾಮಣಿ ಪೊಲೀಸ್ ಠಾಣೆಗೆ ದೂರು ನೀಡಿದ್ಧಾರೆ.
ರಚನಾ ಎಂಬ ಮಹಿಳೆ ತಮ್ಮ ಮನೆಯಲ್ಲೇ ದೇವರ ಫೋಟೋ ಎದುರಯ ಮಂಜುನಾಥ್ ಎಂಬ ತಮ್ಮ ಶಾಲೆಯ ವಾಹನ ಚಾಲಕನನ್ನೇ ಮದುವೆಯಾಗಿದ್ದರು. ವಿಶೇಷವೆಂದರೆ ಮಾಜಿ ಪತಿ ಈಶ್ವರ್ ಗೌಡ ಮುಂದೆ ನಿಂತು ಮದುವೆ ಮಾಡಿಸಿದ್ದರು ಎಂದು ವರದಿಯಾಗಿತ್ತು.
ಆದರೆ, ಇದೀಗ ಮಂಜುನಾಥ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ರಚನಾ ನನ್ನನ್ನ ಲೈಂಗಿಕವಾಗಿ ಬಳಸಿಕೊಂಡಿದ್ದರು. ಅವರ ಕಾಟ ಸಹಿಸಲಾಗದೇ ಚಿಂತಾಮಣಿ ಬಿಟ್ಟು ಬೆಂಗಳೂರಿಗೆ ಬಂದಿದ್ದೆ. ಆದರೆ, ನನ್ನನ್ನ ಹೊಡೆದು ಬಡಿದು ಮದುವೆ ಮಾಡಿಸಿದ್ದಾರೆ ಎಂದು ದೂರಿನಲ್ಲಿ ಮಂಜುನಾಥ್ ಆರೋಪಿಸಿದ್ದಾರೆ. ಪತ್ನಿ ರಚನಾ ಸಹ ಮಂಜುನಾಥ್ ವಿರುದ್ಧ ದೂರು ನೀಡಿದ್ದಾರೆ ಎಂದು ವರದಿಯಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ