Publish Date: Thu, 23 Dec 2021 (08:38 IST)
Updated Date: Thu, 23 Dec 2021 (08:39 IST)
ಬೆಳಗಾವಿ : ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪಗೆ RTPCR ಟೆಸ್ಟ್ ಮಾಡಲಾಗಿದೆ. ಹೌದು ಅಚ್ಚರಿಯಾದ್ರೂ ಇದು ನಿಜ.
ಬುಧವಾರವಷ್ಟೆ ಸದನದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಯಡಿಯೂರಪ್ಪಗೆ ಯಾಕೆ RTPCR ಟೆಸ್ಟ್ ಮಾಡಲಾಯಿತು ಅಂದರೆ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ದುಬೈಗೆ ತೆರಳಲಿದ್ದಾರೆ.
ಕುಟುಂಬ ಸಮೇತ 3 ದಿನ ದುಬೈಗೆ ತೆರಳುತ್ತಿರುವ BSY ದುಬೈ ಕನ್ನಡ ಸಂಘದ ಶಾಲೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ನಾಳೆ ಶುಕ್ರವಾರ ವಿದೇಶ ಪ್ರವಾಸ ಕೈಗೊಳ್ಳುವ ಸಲುವಾಗಿ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ನಿನ್ನೆ ಸುವರ್ಣಸೌಧದಲ್ಲಿ RTPCR ಟೆಸ್ಟ್ ಮಾಡಿಸಿದ್ದಾರೆ. ಯಡಿಯೂರಪ್ಪ ಇಂದು ಸಂಜೆ ಬೆಳಗಾವಿಯಿಂದ ಬೆಂಗಳೂರಿಗೆ ಪ್ರಯಾಣ ಮಾಡಲಿದ್ದಾರೆ.