Publish Date: Wed, 14 Jun 2023 (12:35 IST)
Updated Date: Wed, 14 Jun 2023 (12:36 IST)
ಮಂಡ್ಯ : ವಿದ್ಯುತ್ ಬಿಲ್ ಏರಿಕೆಯಾಗಿದೆ ಎಂದು ರಾಜ್ಯದ ಹಲವು ಕಡೆ ಜನರು ಪ್ರತಿಭಟನೆ ನಡೆಸುತ್ತಿದ್ದರೆ ಮಂಡ್ಯ ನಗರದಲ್ಲಿ ಇನ್ನೂ ವಿದ್ಯುತ್ ಬಿಲ್ ಜನರ ಕೈ ಸೇರಿಲ್ಲ.
ಸಾಧಾರಣ ರಾಜ್ಯದೆಲ್ಲಡೆ ಪ್ರತಿ ತಿಂಗಳ ಮೊದಲ ವಾರ ಮೀಟರ್ ರೀಡರ್ ಮನೆಗೆ ಬಂದು ಲೆಕ್ಕ ಹಾಕಿ ಬಿಲ್ ನೀಡುತ್ತಾರೆ. ಆದರೆ ಈ ಬಾರಿ ಜೂನ್ 14 ಆದರೂ ಮೀಟರ್ ರೀಡರ್ ಮನೆ ಬಂದಿಲ್ಲ.
ಅರ್ಧ ತಿಂಗಳು ಕಳೆದ ಬೆನ್ನಲ್ಲೇ ಜನರು ಈಗ ಗೊಂದಲಕ್ಕೆ ಒಳಗಾಗಿದ್ದಾರೆ. ವಿದ್ಯುತ್ ಬಿಲ್ ಜಾಸ್ತಿ ಮಾಡಲು ಚೆಸ್ಕಾಂ ಮುಂದಾಗಿದ್ಯಾ ಎಂದು ಜನ ಪ್ರಶ್ನಿಸುತ್ತಿದ್ದಾರೆ.