ಬಾಲಾಪರಾಧವನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆ ಇರಿಸಿದ್ದು, ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗೆ ಬಾಲಾಪರಾಧಿ ಪೊಲೀಸ್ ಘಟಕ ಸ್ಥಾಪಿಸಲು ತೀರ್ಮಾನಿಸಿದೆ. ಅದರಂತೆ ಎಲ್ಲ ಜಿಲ್ಲೆಗಳಲ್ಲಿಯೂ ಪೊಲೀಸ್ ಘಟಕದ ಜತೆಗೆ ಪ್ರತಿ ಠಾಣೆಯಲ್ಲಿಯೂ ಒಬ್ಬರು ಆರಕ್ಷಕರನ್ನು ನೇಮಿಸಲಿದ್ದು, ಆ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಲಾಗುವುದು. ಇಲ್ಲಿ ಅಡ್ಡದಾರಿ ಹಿಡಿಯುವ ಮಕ್ಕಳ ಮನಪರಿವರ್ತನೆ ಕಾರ್ಯವೂ ನಡೆಯಲಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.