ಸಿಎಂ ಮೇಲೆ ಕಾಗೆ ಹಿಕ್ಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯರಿಗೆ ಕಾಗೆ ಕಾಟ ಶುರುವಾಗಿದೆ ಎಂದ ಮೇಲೆ ನಾನೇನು ಮಾಡಕ್ಕಾಗುತ್ತೆ. ಆದರೆ, ಕಾಗೆ ಬಿಟ್ಟಿದ್ದು ಮಾತ್ರ ನಾನಲ್ಲ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪ ಹಾಸ್ಯ ಚಟಾಕಿ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ತಮ್ಮ ಹಾಗೂ ಬಿ.ಎಸ್.ಯಡಿಯೂರಪ್ಪ ನಡುವಿನ ಭಿನ್ನಾಭಿಪ್ರಾಯ ಸದ್ಯದಲ್ಲಿಯೇ ಬಗೆಹರಿಯಲಿದೆ. ಅವರವಿಂದ ಲಿಂಬಾವಳಿ ಮತ್ತು ಆಯನೂರು ಮಂಜುನಾಥ್ ಮಂಜುನಾಥ್ ನೀಡಿರುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಲ್ಲ ಎಂದರು.
ಕರ್ನಾಟಕ ಹಾಗೂ ಕೇರಳ ಗಡಿ ಭಾಗದಲ್ಲಿರುವ ಮಂಜೇಶ್ವರದಲ್ಲಿ ಗೋವಿಂದ ಪೈ ಗಿಳಿವಿಂಡ್ ಸ್ಮಾರಕ ಉದ್ಘಾಟನಾ ಸಮಾರಂಭದಲ್ಲಿ ತೆರೆದ ವೇದಿಕೆಯಲ್ಲಿ ಕುಳಿತಿದ್ದ ಸಿದ್ದರಾಮಯ್ಯ ಅವರು ಮೇಲೆ ನಿನ್ನೆ ಕಾಗೆ ಹಿಕ್ಕಿ ಹಾಕಿದ ಘಟನೆ ನಡೆದಿತ್ತು.
ತಮ್ಮ ಪಂಚೆಯ ಮೇಲೆ ಬಿದ್ದಿದ್ದ ಕಾಗೆಯ ಹಿಕ್ಕೆ ಕಂಡು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಚಲಿತರಾಗಿದ್ದು, ತಕ್ಷಣವೇ ಸಿಬ್ಬಂದಿ ವರ್ಗದವರು ಹಿಕ್ಕೆಯನ್ನು ಶುಚಿಗೊಳಿದ್ದರು.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.