Select Your Language

Notifications

webdunia
webdunia
webdunia
webdunia

ರಾಜ್ಯದಲ್ಲಿ ಎಂಜಿನೀರಿಂಗ್ ಕಾಲೇಜು ಒಪೆನ್

ರಾಜ್ಯದಲ್ಲಿ ಎಂಜಿನೀರಿಂಗ್ ಕಾಲೇಜು ಒಪೆನ್
ಬೆಂಗಳೂರು , ಭಾನುವಾರ, 9 ಜನವರಿ 2022 (15:39 IST)
ಬೆಂಗಳೂರು ನಗರ ಜಿಲ್ಲೆಯ ಎಂಜಿನಿಯರಿಂಗ್(engineering) ಕಾಲೇಜುಗಳಿಗೆ ಆಫ್‌ಲೈನ್(offline) ತರಗತಿಗಳನ್ನು ನಡೆಸಲು ಅನುಮತಿ ನೀಡುವ ಜನವರಿ 4 ರ ಕೋವಿಡ್(covid) ನಿರ್ಬಂಧದ ಆದೇಶಗಳನ್ನು ಸರ್ಕಾರ ಶುಕ್ರವಾರ ಬದಲಾಯಿಸಿದೆ.
ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು ಜನವರಿ 6 ರಂದು ಹೊರಡಿಸಿದ ಪರಿಷ್ಕೃತ ಆದೇಶವು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ (VTU) ಸಂಯೋಜಿತವಾಗಿರುವ ಎಲ್ಲಾ ಸಂಸ್ಥೆಗಳು ಮತ್ತು ಕಾಲೇಜುಗಳಿಗೆ ಕೋವಿಡ್-ಸುರಕ್ಷತಾ ಪ್ರೋಟೋಕಾಲ್‌ಗಳನ್ನು (protocol)ಕಟ್ಟುನಿಟ್ಟಾಗಿ ಅನುಸರಿಸುವ ಮೂಲಕ ಆಫ್‌ಲೈನ್(offline) ತರಗತಿಗಳನ್ನು(classes) ನಡೆಸಲು ಅನುವು ಮಾಡಿಕೊಡುತ್ತದೆ.
 
ಪರಿಷ್ಕೃತ ಆದೇಶದೊಂದಿಗೆ ಎಂಜಿನಿಯರಿಂಗ್ ಕಾಲೇಜುಗಳು ಆಫ್‌ಲೈನ್ ತರಗತಿಗಳನ್ನು ಮುಂದುವರಿಸಲಿವೆ. ಸರಕಾರದಿಂದ ಸ್ಪಷ್ಟನೆ ಬಾರದ ಹಿನ್ನೆಲೆಯಲ್ಲಿ ಗುರುವಾರ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ಆದರೆ, ಪರಿಷ್ಕೃತ ಆದೇಶವು ವಿಟಿಯುಗೆ ಸಂಯೋಜಿತವಾಗಿರುವ ಕಾಲೇಜುಗಳಿಗೆ ಮಾತ್ರ ವಿನಾಯಿತಿಯನ್ನು ವಿಸ್ತರಿಸಿದ್ದರಿಂದ ಗೊಂದಲವನ್ನು ಸೃಷ್ಟಿಸಿದೆ. ಎಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ವಿಟಿಯುಗೆ ಸಂಬಂಧಿಸದ ವಿಶ್ವವಿದ್ಯಾಲಯ ವಿಶ್ವೇಶ್ವರಯ್ಯ ಎಂಜಿನಿಯರಿಂಗ್ ಕಾಲೇಜು ಸ್ಪಷ್ಟನೆ ನೀಡುವಂತೆ ಒತ್ತಾಯಿಸಿತು.
 
'ಖಾಸಗಿ ವಿಶ್ವವಿದ್ಯಾಲಯಗಳು ಮತ್ತು ಎಂಜಿನಿಯರಿಂಗ್ ಕೋರ್ಸ್‌ಗಳನ್ನು ನೀಡುತ್ತಿರುವ ಇತರ ವಿಶ್ವವಿದ್ಯಾಲಯಗಳ ಘಟಕ ಕಾಲೇಜುಗಳ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಸ್ಪಷ್ಟನೆ ನೀಡುವಂತೆ ಉನ್ನತ ಶಿಕ್ಷಣ ಇಲಾಖೆಯನ್ನು ಕೋರುತ್ತೇವೆ' ಎಂದು ಖಾಸಗಿ ವಿಶ್ವವಿದ್ಯಾಲಯವೊಂದರ ಉಪಕುಲಪತಿ ಹೇಳಿದರು.

Share this Story:

Follow Webdunia kannada

ಮುಂದಿನ ಸುದ್ದಿ

ರಾಜ್ಯದಲ್ಲಿ ಒಮೈಕ್ರೋನ್ ಹಾವಳಿ