Webdunia - Bharat's app for daily news and videos

Install App

ಇಂಜಿನಿಯರಿಂಗ್ ಕಾಲೇಜ್ ಶುಲ್ಕ ಹೆಚ್ಚಳ

Webdunia
ಶನಿವಾರ, 2 ಮಾರ್ಚ್ 2019 (17:17 IST)
ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ಶುಲ್ಕ ಈ ಬಾರಿ ದುಬಾರಿಯಾಗಲಿದೆ.
ರಾಜ್ಯದಲ್ಲಿನ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶ ಶುಲ್ಕವನ್ನು 2019-20ನೇ ಸಾಲಿಗೆ ಶೇ. 10ರಷ್ಟು ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ. ದೇವೇಗೌಡ ಹೇಳಿದ್ದಾರೆ.

ಕಾಮೆಡ್ಕೆ ಸೇರಿದಂತೆ ಖಾಸಗಿ ಇಂಜಿನಿಯರಿಂಗ್ ಕಾಲೇಜುಗಳ ಆಡಳಿತ ಮಂಡಳಿಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳೊಂದಿಗೆ ಶುಲ್ಕ ನಿಗದಿ ಕುರಿತಂತೆ ಸಭೆ ನಡೆಸಿದ ನಂತರ ಈ ವಿಷಯ ತಿಳಿಸಿದರು.
ಬಾರಿ ಖಾಸಗಿ ಶಿಕ್ಷಣ ಸಂಸ್ಥೆಗಳು ಶೇ. 25ರಷ್ಟು ಪ್ರವೇಶ ಶುಲ್ಕ ಏರಿಕೆಗೆ ಒತ್ತಾಯ ಮಾಡಿದ್ದವು. ಬೇಡಿಕೆಯನ್ನು ಬದಿಗೊತ್ತಿ ಶೇ. 10ರಷ್ಟು ಪ್ರವೇಶ ಶುಲ್ಕ ಏರಿಕೆಗೆ ತೀರ್ಮಾನ ಕೈಗೊಳ್ಳಲಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಅವರೊಂದಿಗೆ ಚರ್ಚಿಸಿದ ನಂತರ ಇಂಜಿನಿಯರಿಂಗ್ ಪ್ರವೇಶ ಶುಲ್ಕವನ್ನು ಶೇ. 10ರಷ್ಟು ಏರಿಕೆಗೆ ತೀರ್ಮಾನಿಸಲಾಗಿದೆ ಎಂದು ಹೇಳಿದರು.

2019-20ನೇ ಸಾಲಿಗೆ ಮೊದಲ ಸ್ಲ್ಯಾಬ್ನಲ್ಲಿ 58,800 ರೂ., 2ನೇ ಸ್ಲ್ಯಾಬ್ನಲ್ಲಿ 65,340 ರೂ. ಶುಲ್ಕ ನಿಗದಿ ಮಾಡಲಾಗಿದೆ. ಕಾಮೆಡ್ಕೆ ವ್ಯಾಪ್ತಿಗೊಳಪಡುವ ಇಂಜಿನಿಯರಿಂಗ್ ಕಾಲೇಜುಗಳ ಪ್ರವೇಶಕ್ಕಾಗಿ  2019-20ನೇ ಸಾಲಿಗೆ ಪ್ರವೇಶ ಶುಲ್ಕ ಮೊದಲ ಸ್ಲ್ಯಾಬ್ನಲ್ಲಿ 1,43,748 ರೂ.ಗಳಾಗಿದ್ದರೆ, 2ನೇ ಸ್ಲ್ಯಾಬ್ನಲ್ಲಿ 2,1,960 ರೂ.ಗಳಾಗಿರುತ್ತದೆ ಎಂದು ಸಚಿವರು ವಿವರ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮಂಗಳೂರು ರೈಲ್ವೇ ನಿಲ್ದಾಣದಲ್ಲಿ ಇನ್ನೇನು ರೈಲಿನಡಿಗೆ ಬೀಳಲಿದ್ದ ವ್ಯಕ್ತಿಯನ್ನು ಬದುಕಿಸಿದ ಸಿಬ್ಬಂದಿ: ರೋಮಾಂಚಕ video

Karnataka Weather: ಕರ್ನಾಟಕದಲ್ಲಿ ಇಂದು ಮಳೆಯ ಸಾಧ್ಯತೆ ಎಷ್ಟಿದೆ

ದೆಹಲಿಗೆ ಬರುತ್ತಿದ್ದ ಏರ್‌ ಇಂಡಿಯಾ 300 ಅಡಿಗಳಷ್ಟು ಕುಸಿದ ಕೇಸ್‌, ತನಿಖೆಯಲ್ಲಿ ಊಹಿಸಲಾಗದ ತಿರುವು

ಚಲಿಸುತ್ತಿದ್ದ ರೈಲಿನ ಟಯರ್‌ಗೆ ಸಿಲುಕಿ ಇನ್ನೇನು ಪ್ರಾಣಕ್ಕೆ ಅಪಾಯವಾಗುತ್ತೆ ಅನ್ನುವಷ್ಟ್ರಲ್ಲಿ ರಕ್ಷಿಸಿದ ರೈಲ್ವೆ ಪಾಯಿಂಟ್ಸ್‌ಮ್ಯಾನ್, Video

ವಂದೇ ಮಾತರಂಗೆ ಅಪಮಾನಿಸಿದ್ರೆ ಶಿಕ್ಷೆ ವಿಧಿಸುವ ಮಸೂದೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅಂಕಿತ, ಹಾಕಿದ್ರೆ ಶಿಕ್ಷೆಯೇನು ಗೊತ್ತಾ

ಮುಂದಿನ ಸುದ್ದಿ
Show comments